ಕಲಬುರಗಿಗೆ ಮತ್ತೊಂದು ಆಘಾತ: ಮತ್ತೊಂದು ಮಹಿಳೆಗೆ ಸೋಂಕು ದೃಢ: ಪೀಡಿತರ ಸಂಖ್ಯೆ12ಕ್ಕೆ

0
332

ಕಲಬುರಗಿ: ಕೊರೋನಾ‌ ಸೋಂಕಿನಿಂದ ಕಳೆದ‌ ಏಪ್ರಿಲ್ 7 ರಂದು‌ ಮೃತಪಟ್ಟಿದ ಕಲಬುರಗಿಯ 65 ವರ್ಷದ ವ್ಯಕ್ತಿಯ ನೇರ ಸಂಪರ್ಕದಲ್ಲಿ ಬಂದಿರುವ 24 ವರ್ಷದ ಸೊಸೆಗೆ ಮತ್ತು ಸದರಿ ವ್ಯಕ್ತಿಗೆ ಚಿಕಿತ್ಸೆ‌ ನೀಡಿದ ಬಹಮನಿ ಅಸ್ಪತ್ರೆಯಲ್ಲಿ ಆಯಯಾಗಿ ಕಾರ್ಯನಿರ್ವಹಿಸುತ್ತಿದ್ದ ಕಲಬುರಗಿ ನಗರದ ಅದರ್ಶ ನಗರದ 38 ವರ್ಷದ ಮಹಿಳೆಗೆ ರವಿವಾರ ಕೊರೋನಾ ಪಾಸಿಟಿವ್ ಎಂದು ವೈದ್ಯಕೀಯ ವರದಿಯಿಂದ ದೃಢವಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.

ಪ್ರಸ್ತುತ ಈ ಇಬ್ಬರು ಸೊಂಕಿತರು ಕಲಬುರಗಿ ಇ.ಎಸ್.ಐ.ಸಿ. ಆಸ್ಪತ್ರೆಯ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Contact Your\'s Advertisement; 9902492681

ಇದರಿಂದ ಜಿಲ್ಲೆಯಲ್ಲಿ ಇದೂವರೆಗೆ ಕೊರೋನಾ‌ ಪಾಸಿಟಿವ್ ಸಂಖ್ಯೆ 12ಕ್ಕೆ ಏರಿದಂತಾಗಿದ್ದು, ಇದರಲ್ಲಿ ಇಬ್ಬರು ವ್ಯಕ್ತಿಗಳು ನಿಧನರಾದರೆ. ಇಬ್ಬರು ವ್ಯಕ್ತಿಗಳು ಕೊರೋನಾ‌ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಡಿ.ಸಿ.ಶರತ್ ಬಿ. ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here