ಬುದ್ಧ, ಬಸವ, ಅಂಬೇಡ್ಕರ್ ರು ಜಾತ್ಯಾತೀತ, ಧರ್ಮಾತೀತ, ಸೀಮಾತೀತ ವ್ಯಕ್ತಿಗಳು

0
80

ಕಲಬುರಗಿ: ಬುದ್ಧ,ಬಸವ ಹಾಗೂ ಬಾಬಾ ಸಾಹೇಬ ಅಂಬೇಡ್ಕರ್ ಇವರು ಜೀವಕಾರುಣ್ಯದ ಮಹಾ ಪ್ರತಿಪಾದರಲ್ಲಿ ಪ್ರಮುಖರು ಎಂದು ಗುಲ್ಬರ್ಗಾ ವಿಶ್ವ ವಿದ್ಯಾಲಯದ ಪ್ರೊ.ಎಚ್.ಟಿ.ಪೋತೆಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಾಬಾ ಸಹೇಬ್ ಅವರ ಹುಟ್ಟು ಹಬ್ಬಗಳನ್ನು ಕೇವಲ ಆಯಾ ಜಾತಿ,ಧರ್ಮದವರು ಆಚರಿಸುತ್ತಾರೆ. ಅದು ಸಾಮಾನ್ಯ.ಉಳಿದವರು ಅವರು ನಮಗೇನು ಸಂಬಂಧ ಎಂದು ಸಣ್ಣತನ ಪ್ರದರ್ಶನ ಮಾಡಿ ದರೆ,ಅದು ಮನುಕುಲಕ್ಕೆ ಅವಮಾನಿಸದಂತೆ.ಬಾಬಾಸಾಹೇಬ್ ಅಂಬೇಡ್ಕರ್ ಪ್ರಸ್ತುತದ ಇಡೀ ಜಗತ್ತು ಗೌರವಿಸುತ್ತಿದೆ.ಅವರಾರೂ ಭಾರತೀಯರಲ್ಲ,ಭಾರತದ ಯಾವುದೇ ಮತ ಧರ್ಮಕ್ಕೆ ಸೇರಿದವರಲ್ಲ.ಆದರೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ವಿದ್ವತ್ತು, ಪ್ರತಿಭೆ, ಸಿಧ್ಧಾಂತಕ್ಕೆ ಬಧ್ಧರಾದವರು.ಅದರೆ ಭಾರತೀಯ ರಾದ ನಾವು ಕೂಡ ಅವರಂತಾಗಬೇಕಲ್ಲವೆ.

Contact Your\'s Advertisement; 9902492681

ಆದ್ದರಿಂದ ಜೀವಕಾರುಣ್ಯಕ್ಕಾಗಿ ದುಡಿದ ಬುದ್ಧ,ಬಸವ, ಬಾಬಾಸಾಹೇಬ್ ಅಂಬೇಡ್ಕರ್ ಈ ಮುಂತಾದವರನ್ನು ಜಾತ್ಯತೀತ, ಧರ್ಮಾತೀತ ಹಾಗೂ ಸೀಮಾತೀತವಾಗಿ ಗೌರವಸುವುದು,ಅವರ ಚಿಂತನೆಗಳನ್ನು ಅಪ್ಪಿಕೊಳ್ಳುವುದರ ಮೂಲಕ ಹೊಸ ಭಾರತ ಕಟ್ಟಬೇಕಾಗಿದೆ ಎಂದು ಪ್ರೊ. ಪೋತೆ ಕರೆ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here