ಸುರಪುರ: ಕೊರೊನಾ ಎಂಬ ಮಹಾಮಾರಿ ಇಂದು ಇಡೀ ಜಗತ್ತನ್ನೆ ತಲ್ಲಣಗೊಳಿಸಿದೆ,ಇದರಿಂದ ಎಲ್ಲರು ರಕ್ಷಿಸಿಕೊಳ್ಳಲು ನಮ್ಮ ನಮ್ಮ ಮನೆಗಳಲ್ಲಿಯೆ ಇರುವುದು ಅನಿವಾರ್ಯವಾಗಿದೆ ಎಂದು ನಗರದ ನಿಷ್ಠಿ ಕಡ್ಲೆಪ್ಪನವರ ಮಠದ ಶ್ರೀ ಪ್ರಭುಲಿಂಗ ಮಹಾಸ್ವಾಮಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,ಜನತೆಯ ರಕ್ಷಣೆಗಾಗಿ ಸರಕಾರ ಲಾಕ್‌ಡೌನ್ ಘೋಷಣೆ ಮಾಡಿದ್ದು ಇದನ್ನು ಎಲ್ಲರು ತಪ್ಪದೆ ಪಾಲಿಸುವ ಮೂಲಕ ಕೊರೊನಾ ಸೊಂಕು ಹರಡದಂತೆ ಮುಂಜಾಗ್ರತೆ ವಹಿಸೋಣ. ಹೊರಗಡೆ ಅನಾವಶ್ಯಕವಾಗಿ ಹೋಗುವುದು ಬೇಡ.ಹಾಗೊಮ್ಮೆ ಹೊರಗೆ ಹೋಗುವ ಅನಿವಾರ್ಯತೆ ಇದ್ದಲ್ಲಿ ಮುಖಕ್ಕೆ ಮಾಸ್ಕ್ ಧರಿಸಿಯೆ ಹೊರಗೆ ಹೋಗಿ.
ಯಾವುದೆ ಧರ್ಮಿಯರಾದರು ಮನೆಯಲ್ಲಿಯೆ ಇದ್ದು ನಿಮ್ಮ ನಂಬಿಕೆಯ ದೇವರ ಮುಂದೆ ಪ್ರಾರ್ಥನೆ ಮಾಡುವ ಮೂಲಕ ಕೊರೊನಾ ನಿರ್ಮೂಲನೆಗೆ ಕರೆ ನಿಡೋಣ ಎಂದು ತಿಳಿಸಿದ್ದಾರೆ.ಇಂದು ನಮ್ಮೆಲ್ಲರಿಗಾಗಿ ಹಗಲಿರಳು ಸೇವೆ ಸಲ್ಲಿಸುತ್ತಿರುವ ವೈದ್ಯರು,ನರ್ಸ್‌ಗಳು ,ಪೊಲೀಸರು,ನಗರಸಭೆ,ಪಂಚಾಯತ್ ಸಿಬ್ಬಂದಿಗಳ ಸೇವೆಗೆ ಸಹಕರಿಸೋಣ ಎಂದು ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.