ಮೆಡಿಕಲ್‌ಗಳಲ್ಲಿ ದೊರೆಯದ ಮಧುಮೇಹ ಥೈರಾಯ್ಡ್ ಔಷಧಿ:ರೋಗಿಗಳ ಪರದಾಟ

0
58

ಸುರಪುರ: ನಗರದ ಮೆಡಿಕಲ್‌ಗಳಲ್ಲಿ ಮಧುಮೇಹ ಥೈರಾಯ್ಡ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ಸಂಬಂಧಿಸಿದ ದೀರ್ಘ ಕಾಲದ ಕಾಯಿಲೆಗಳ ಔಷಧಿ ಸಿಗದಿರುವುದರಿಂದ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಮಧುಮೇಹ ಮತ್ತು ಥೈರಾಯ್ಡ್ ಹಾಗು ಹೃದಯ ಸಂಬಂಧಿ ಕಾಯಿಲೆಗಳನ್ನು ಕಲಬುರ್ಗಿ ಬೆಂಗಳೂರು ಮೀರಜ್ ಮತ್ತಿತರೆಡೆಗಳಲ್ಲಿನ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ರೋಗಿಗಳು ಅಲ್ಲಿನ ಮೆಡಿಕಲ್‌ಗಳಲ್ಲಿಯೆ ಔಷಧಿಯನ್ನು ತೆಗೆದುಕೊಂಡು ಬಂದಿರುತ್ತಾರೆ.ನಂತರ ಮತ್ತೆ ಔಷಧಿ ಬೇಕಾದಲ್ಲಿ ಅದೇ ಆಸ್ಪತ್ರೆಗಳಿಗೆ ಪರೀಕ್ಷೆಗಾಗಿ ತೆರಳಿ ಅಲ್ಲಿಯೆ ಪುನಃ ಔಷಧಿ ತೆಗೆದುಕೊಂಡು ಬರುತ್ತಾರೆ.

Contact Your\'s Advertisement; 9902492681

ನಮ್ಮ ತಾಯಿ ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿದ್ದಾರೆ,ನಗರದಲ್ಲಿನ ಮೆಡಿಕಲ್‌ಗಳಲ್ಲಿ ಥೈರಾಯ್ಡ್ ಮಾತ್ರೆಗಳು ಸಿಗುತ್ತಿಲ್ಲ.ಬೇರೆ ಕಡೆಗೆ ಹೋಗಿ ತರಲು ಲಾಕ್‌ಡೌನ್ ಇದೆ ಮತ್ತು ಕಲಬುರ್ಗಿಯಲ್ಲಿನ ಆಸ್ಪತ್ರೆ ಮೆಡಿಕಲ್‌ಗಳು ಬಂದಾಗಿವೆ.ಇದರಿಂದ ನಮ್ಮ ತಾಯಿಯವರು ಔಷಧಿ ಇಲ್ಲದೆ ಸಮಸ್ಯೆ ಪಡುವಂತಾಗಿದೆ.ಸರಕಾರ ಇಲ್ಲಿಯೆ ಔಷಧಿ ದೊರೆಯುವಂತೆ ಮಾಡಬೇಕಿದೆ. – ತಿರುಮಲ ಮುದಗಲ್

ಆದರೆ ಈಗ ದೇಶದಲ್ಲಿ ಕೊರೊನಾ ಕಾರಣದಿಂದ ಲಾಕ್‌ಡೌನ್ ಘೋಷಣೆಯಾಗಿದ್ದರಿಂದ ಬಹುತೇಕ ಖಾಸಗಿ ಆಸ್ಪತ್ರೆಗಳು ಬಾಗಿಲು ಮುಚ್ಚಿದ್ದರಿಂದ ಅಲ್ಲಿಯ ಮೆಡಿಕಲ್‌ಗಳು ಬಂದಾಗಿವೆ.ಇದರಿಂದ ಸದ್ಯ ಔಷಧಿ ಖಾಲಿಯಾಗಿರುವ ರೋಗಿಗಳು ಔಷಧಿ ಇಲ್ಲದೆ,ಅತ್ತ ಕಲಬುರ್ಗಿ ಬೆಂಗಳೂರುಗಳಲ್ಲಿನ ಖಾಸಗಿ ಮೆಡಿಕಲ್‌ಗಳು ಬಂದಾಗಿದ್ದರಿಂದ ಸಂಕಷ್ಟ ಪಡುವಂತಾಗಿದೆ. ದೀರ್ಘ ಕಾಲದ ಕಾಯಿಲೆಗಳ ಪೀಡಿತರಿಗೆ ಅನುಕೂಲವಾಗಲು ಎಲ್ಲಾ ವಿಧದ ರೋಗಗಳಿಗು ತಾಲೂಕು ಆಸ್ಪತ್ರೆಗಳಲ್ಲಿ ಔಷಧಿ ದೊರೆಯುವಂತೆ ಕ್ರಮ ಕೈಗೊಳ್ಳಬೇಕಾದ ಜವಬ್ದಾರಿ ಸರಕಾರದ ಮೇಲಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here