ಆಹಾರವಿಲ್ಲ ಎಂದ ಅಲೆಮಾರಿಗಳಿಗೆ ಗಂಟೆಯಲ್ಲಿಯೆ ಆಹಾರ ಪದಾರ್ಥಗಳ ಕಿಟ್ ಪೂರೈಕೆ

0
80

ಕಲಬುರಗಿ: ನಗರದ ಕೇಂದ್ರೀಯ ಬಸ್ ನಿಲ್ದಾಣದ ಪಕ್ಕದಲ್ಲಿ ಟೆಂಟ್ ಹಾಕಿಕೊಂಡು ವಾಸಿಸುತ್ತಿರುವ ಅಲೆಮಾರಿ ಜನಾಂಗದವರು ತಮಗೆ ತಿನ್ನಲು ಆಹಾರವಿಲ್ಲ. ಹೊರಗಡೆ ಹೋದರೆ ಪೊಲೀಸರ ಭಯವಿದ್ದು, ದಯವಿಟ್ಟು ಸಹಾಯಕ್ಕೆ ಬನ್ನಿ ಎಂದು ಅಂಗಲಾಚಿದ್ದೆ ತಡ ತಕ್ಷಣ ಕಾರ್ಯಪ್ರವೃತ್ತರಾದ ಕಲಬುರಗಿ ಜಿಲ್ಲಾಡಳಿತದ ಆಹಾರ ಸಮಿತಿಯ ತಂಡ ಅಲೆಮಾರಿಗಳ ಗುಡಿಸಲಿಗೆ ಹೋಗಿ ಆಹಾರ ಪದಾರ್ಥ ಸಾಮಗ್ರಿಗಳ ಕಿಟ್ ವಿತರಿಸಿ ಅವರ ಹಸಿವನ್ನು ನೀಗಿಸಿದೆ.

ಬಸ್ ನಿಲ್ದಾಣದ ಬಳಿ ಕಣ್ಣಿ ಮಾರ್ಕೆಟ್ ಹೊಂದಿಕೊಂಡಂತೆ ಜೋಪಡಿ, ಟೆಂಟ್ ಹಾಕಿಕೊಂಡಿರುವ ಈ ನಿವಾಸಿಗಳು ಸಣ್ಣ-ಪುಟ್ಟ ವ್ಯಾಪಾರ ಮಾಡಿಕೊಂಡಿದ್ದಾರೆ. ಲಾಕ್ ಡೌನ್ ಪರಿಣಾಮ ಕೈಯಲ್ಲಿ ಕಾಸಿಲ್ಲದೆ ಊಟಕ್ಕೆ ಪರದಾಡುವಂತಾಗಿದ್ದು, ಸಾಮಾಜಿಕ ಜಾಲತಾಣದ ಮೂಲಕ ಭಾನುವಾರ ಮಧ್ಯಾಹ್ನ ಅಲ್ಲಿನ ಕುಟುಂಬಗಳು ಬೇಡಿಕೊಂಡರು.

Contact Your\'s Advertisement; 9902492681

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಈ ಮಾಹಿತಿ ಮಧ್ಯಾಹ್ನ 3.30 ಗಂಟೆಗೆ ದೊರೆತ ಕೂಡಲೇ ಇದನ್ನು ಜಿಲ್ಲಾಡಳಿತದ ಆಹಾರ ಸಮಿತಿ ಮುಖ್ಯಸ್ಥರಾದ ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಜಂಟಿ ನಿರ್ದೇಶಕಿ ಪ್ರವೀಣ ಪ್ರಿಯಾ ಅವರಿಗೆ ಮಾಹಿತಿ ನೀಡಲಾಯಿತು.

ತಕ್ಷಣವೇ ಕಾರ್ಯಪ್ರವೃತ್ತರಾದ ಪ್ರವೀಣ್ ಪ್ರಿಯಾ ಅವರು ಅಧಿಕಾರಿಗಳ ತಂಡವನ್ನು ಕಣ್ಣಿ ಮಾರ್ಕೆಟ್ ಪ್ರದೇಶಕ್ಕೆ ಕಳುಹಿಸಿ ವಿವರ ಪಡೆದು, ಸಾಯಂಕಾಲ 5 ಗಂಟೆಯೊಳಗಾಗಿ ಆಹಾರ ಸಮಿತಿಯ ಸದಸ್ಯರಾದ ಆಹಾರ ಸುರಕ್ಷತಾ ಅಧಿಕಾರಿ ಡಾ.ದೀಪಕ್ ಸುಖೆ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಅಲ್ಲಾಭಕ್ಷ ಹಾಗೂ ನಿರಾಶ್ರಿತ ಪರಿಹಾರ ಕೇಂದ್ರದ ಮುಖ್ಯಸ್ಥ ಸಂಗಮನಾಥ ಮೋದಿ ಅವರ ಸಮಕ್ಷಮ ಕಣ್ಣಿ ಮಾರ್ಕೆಟ್ ಪ್ರದೇಶದಲ್ಲಿ ಟೆಂಟ್ ಹಾಕಿಕೊಂಡು ವಾಸಿಸುತ್ತಿರುವ ಎಲ್ಲಾ 31 ಕುಟುಂಬಗಳಿಗೆ ಅಡುಗೆಗೆ ಬೇಕಾಗಿರುವ ಅಕ್ಕಿ, ಗೋದಿ ಹಿಟ್ಟು, ಅಡುಗೆ ಎಣ್ಣೆ, ಖಾರದ ಪುಡಿ, ಉಪ್ಪು ಹೀಗೆ ಆಹಾರ ಪದಾರ್ಥಗಳ ಕಿಟ್‍ಗಳನ್ನು ಪ್ರತ್ಯೇಕವಾಗಿ ವಿತರಿಸಿದರು. ಜಿಲ್ಲಾಡಳಿತದ ಆಹಾರ ಸಮಿತಿಯ ತ್ವರಿತ ಸ್ಪಂದನೆಗೆ ಅಲೆಮಾರಿ ನಿವಾಸಿಗಳ ಸಂತೋಷಪಟ್ಟರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here