ಯಾದಗಿರಿ: ಸುರಪುರ ತಾಲೂಕಿನ ಮಾಚಗುಂಡಾಳ ಗ್ರಾಮದ ಬಾಲದಂಡಪ್ಪ ಡಿ.ಬಾಕಲಿ ಎಂಬುವವರ ಜಮೀನಿನಲ್ಲಿ ಬೆಳೆಯಲಾಗಿದ್ದ 18 ಕೆ.ಜಿ. 500 ಗ್ರಾಂ ಗಾಂಜಾ ಗಿಡವನ್ನು ಜಪ್ತಿ ಮಾಡಲಾಗಿದೆ.
ಯಾದಗಿರಿ ಎಸ್ಪಿ ಋಷಿಕೇಶ ಭಗವಾನ್ ಸೋನೆವಾನೆ ಮತ್ತು ಸುರಪುರ ಉಪ ವಿಭಾಗದ ಡಿವೈಎಸ್ಪಿ ವೆಂಕಟೇಶ ಹುಗಿ ಬಂಡಿಯವರ ಮಾರ್ಗದರ್ಶನದಲ್ಲಿ ಸುರಪುರ ಠಾಣೆಯ ಇನ್ಸ್ಪೆಕ್ಟರ್ ಎಸ್.ಎಮ್.ಪಾಟೀಲರ ನೇತೃತ್ವದಲ್ಲಿ ಮುಖ್ಯ ಪೇದೆಗಳಾದ ಮನೋಹರ ಚಂದ್ರಶೇಖರ ಮಂಜುನಾಥ ಮತ್ತು ಪೇದೆಗಳಾದ ಬಸವರಾಜ ಸುಭಾಸ ಪರಮೇಶಿ ಮಹಾಂತೇಶ ಇವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಜಪ್ತಿ ಮಾಡಿದ್ದು, ಗಾಂಜಾದ ಮೌಲ್ಯ 55500 ರೂಪಾಯಿಗಳದ್ದಾಗಿದೆ ಎಂದು ತಿಳಿಬಂದಿದೆ.
ಈ ಕುರಿತು ಸುರಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.