ಸುರಪುರ: ದೇಶದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.ಇಂತಹ ಸಂದರ್ಭದಲ್ಲಿ ಜನತೆ ಜಾಗೃತಿವಹಿಸುವುದು ಮುಖ್ಯವಾಗಿದೆ.ಆದ್ದರಿಂದ ಸರಕಾರ ಈಗಾಗಲೆ ಲಾಕ್‌ಡೌನ್ ಘೋಷಣೆ ಮಾಡಿ ಯಾರೂ ಮನೆಯಿಂದ ಅನಾವಶ್ಯಕವಾಗಿ ಹೊರಗೆ ಬರದಂತೆ ಆದೇಶ ಹೊರಡಿಸಿದೆ.ಇಂತಹ ಸಂದರ್ಭದಲ್ಲಿ ವಿನಾಕಾರಣ ಹೊರಗೆ ಬಂದವರ ಬೈಕ್‌ಗಳನ್ನು ಸೀಜ್ ಮಾಡಲಾಗುವುದು ಎಂದು ಪಿಎಸ್‌ಐ ಚೇತನ್ ತಿಳಿಸಿದರು.
ನಗರದ ರಂಗಂಪೇಟೆಯ ಹನುಮಾನ ಮಂದಿರದ ಸಮೀಪ ಮುಖ್ಯ ರಸ್ತೆಯ ಪಕ್ಕದಲ್ಲಿ ವಿನಾಕಾರಣ ಹೊರಗೆ ಬಂದು ನಿಲ್ಲಿಸಿದ ಬೈಕ್ ಸವಾರರ ಬೆಂಡೆತ್ತಲು ಕಾರ್ಯಾಚರಣೆ ನಡೆಸಿ ನಾಲ್ಕಕ್ಕು ಹೆಚ್ಚು ಬೈಕ್‌ಗಳನ್ನು ಸೀಜ್ ಮಾಡಿ ಮಾತನಾಡಿ,ಜನತೆಗೆ ಹಗಲಿರಳು ವಿನಂತಿ ಮಾಡಿ ಹೊರಗೆ ಬಾರದಂತೆ ತಿಳಿಸುತ್ತೇವೆ,ಆದರೆ ಯಾವುದೆ ಕೆಲಸವಿಲ್ಲದೆ ಸುಮ್ಮನೆ ಸುತ್ತಾಡಲು ಹೊರಗೆ ಬರುವವರಿಗೆ ಸರಿಯದ ಪಾಠ ಕಲಿಸುವುದು ಅನಿವಾರ್ಯವಾಗಿದೆ.
ಆದ್ದರಿಂದ ವಿನಾಕರಣ ಹೊರಗೆ ಬಂದರೆ ಅಂತವರ ಪರಿಶೀಲನೆ ನಡೆಸಿ ಬೈಕ್‌ಗಳನ್ನು ಸೀಜ್ ಮಾಡುತ್ತೆವೆ.ಅಲ್ಲದೆ ಸೀಜ್ ಮಾಡಿದ ಬೈಕ್‌ಗಳನ್ನು ಎಪ್ರಿಲ್ ೩೦ರ ವರೆಗೆ ಬಿಡುವುದಿಲ್ಲ.ಜನತೆ ಈಗಲಾದರು ಎಚ್ಚೆತ್ತು ಕಾರಣವಿಲ್ಲದೆ ಹೊರಗೆ ಬರುವುದನ್ನು ನಿಲ್ಲಿಸಿ ಮನೆಯಲ್ಲಿಯೆ ಇದ್ದರು ಕೊರೊನಾ ನಿರ್ಮೂಲನೆಗೆ ಸಹಕರಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಪೇದೆ ಚಂದ್ರಶೇಖರ ಹರಳಗುಂಡಗಿ ಹಾಗು ನಗರಸಭೆಯ ಅನೇಕ ಪೌರಕಾರ್ಮಿಕರು ಪಿಎಸ್‌ಐ ಆದೇಶದಂತೆ ಮಗರಸಭೆಯ ವಾಹನದಲ್ಲಿ ಎಲ್ಲಾ ಬೈಕ್‌ಗಳನ್ನು ತುಂಬಿಕೊಂಡು ಠಾಣೆಗೆ ಹೊಯ್ಯಲಾಯಿತು.