ಹೈ.ಕ ವಿದ್ಯಾರ್ಥಿ ಒಕ್ಕೂಟದಿಂದ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಆಚರಣೆ

1
160

ರಾಯಚೂರು: ಜಿಲ್ಲೆಯ ಸಿರವಾರ ತಾಲೂಕಿನ ಮಾಚನೂರು ಗ್ರಾಮದಲ್ಲಿ ಹೈದರಾಬಾದ್ ಕರ್ನಾಟಕ ವಿದ್ಯಾರ್ಥಿ ಒಕ್ಕೂಟ ಸಂಘದ ವತಿಯಿಂದ ಭಾರತ ಭಾಗ್ಯವಿಧಾತ,  ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 129ನೇ ಜಯಂತಿಯನ್ನು ಆಚರಿಸಿ ಸಂವಿಧಾನದ ಪ್ರಸ್ತಾವನೆಯನ್ನು ಓದಲಾಯಿತು.

ಈ ಸಂದರ್ಭದಲ್ಲಿ ವಿರುಪಾಕ್ಷಿ ನಿರೂಪಣೆ ಮಾಡುತ್ತ ಬಾಬಾಸಾಹೇಬರ ವಿಚಾರಗಳನ್ನು ತಿಳಿಸಿದರು. ಒಕ್ಕೂಟದ ತಾಲೂಕ ಅಧ್ಯಕ್ಷರಾದ ವಿಜಯ ಮಾಚನೂರು ಬಾಬಾಸಾಹೇಬರು ಒಂದು ಜಾತಿಗೆ ಮಾತ್ರ ಸೀಮಿತವಾಗಿಲ್ಲ ಹಲವು ಜಾತಿ ಜನಾಂಗಕ್ಕೆ ಸೀಮಿತವಾಗಿದ್ದಾರೆ ಎಂದು ತಿಳಿಸಿದರು.

Contact Your\'s Advertisement; 9902492681

ಈ ವೇಳೆಯಲ್ಲಿ ನ್ಯಾಯವಾದಿ ಎಂ.ಮಲ್ಲೇಶ ಮಾಚನೂರು ಮಾತನಾಡಿ, ಬಾಬಾಸಾಹೇಬರ ವಿಚಾರಗಳನ್ನು ತಿಳಿಸುವುದರ ಜೊತೆಗೆ ಅವರ ಹೋರಾಟದ ರಥವನ್ನು ಎಳೆಯಲು ಎಲ್ಲಾ ಅಭಿಮಾನಿಗಳು ಮತ್ತು ಅನುಯಾಯಿಗಳು ಬಾಬಾಸಾಹೇಬರ ಮಾರ್ಗದಲ್ಲಿ ನಡೆದು ಉತ್ತಮ ಶಿಕ್ಷಣ ಪಡೆದು ಪ್ರಜ್ಞಾವಂತರಾಗಿ ಮತ್ತು ವಿದ್ಯಾವಂತರಾಗಿ ಸಮಾಜವನ್ನು ಮತ್ತು ಶೋಷಿತ ಜನರನ್ನು ಸಮಾಜದ ಮುಂಚೂಣಿಗೆ ತಂದು ಅವರಿಗೂ ಸಹ ಸಾಮಾಜಿಕ ರಾಜಕೀಯ ಆರ್ಥಿಕ ಹಕ್ಕುಗಳನ್ನು ನೀಡುವುದರ ಜೊತೆಗೆ ಸದೃಢರನ್ನಾಗಿ ಮಾಡಬೇಕೆಂದು ಈ ಸಂದರ್ಭದಲ್ಲಿ ಕರೆ ನೀಡಿದರು.

ದೇವಾಲಯ ಪ್ರವೇಶಿಸುವ ಬದಲಿಗೆ ಪಂಚ ದೇವಾಲಯಗಳಾದ ಗ್ರಾಮ ಪಂಚಾಯತ್,  ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಎಂಎಲ್ಎ,  ಎಂಪಿ, ಕ್ಷೇತ್ರಗಳಿಗೆ ನಾವು ಪ್ರವೇಶ ಮಾಡಿದಾಗ ಮಾತ್ರ ಜಿಡ್ಡುಗಟ್ಟಿದ ವ್ಯವಸ್ಥೆಯನ್ನು ಸರಿಪಡಿಸಲು ಸಾಧ್ಯ ಎಂದು ಒತ್ತಿ ಹೇಳಿದರು.

ಹಾಗೆಯೇ ಶಿಕ್ಷಣ ಸಂಘಟನೆ ಹೋರಾಟ ಎಂಬ ಮೂರು ಸೂತ್ರಗಳನ್ನು ಅಳವಡಿಸಿಕೊಂಡು ಸದೃಢರಾಗಬೇಕು ಎಂದು ಮತ್ತು ಇಂದು ಸಂಜೆ 8:30 ಕ್ಕೆ ಪ್ರತಿಯೊಬ್ಬರ ಮನೆಯಲ್ಲೂ ದೀಪವನ್ನು ಹಚ್ಚುವುದರ ಮೂಲಕ ಬಾಬಾಸಾಹೇಬರ ಋಣ ತೀರಿಸುವ ಸಂಕಲ್ಪ ಮಾಡೋಣ ಎಂದು ಕರೆ ಕೊಟ್ಟರು.

ಈ ಸಂದರ್ಭದಲ್ಲಿ ಶ್ರೀನಿವಾಸ, ಧನಂಜಯ ಹುಲಿಗೇಶ, ಶರಣಪ್ಪ, ಆನಂದ, ದೊಡ್ಡ ಮಾರಪ್ಪ, ತಿಮ್ಮಪ್ಪ ಸೇರಿದಂತೆ ಮುಂತಾದವರು ಇದ್ದರು.

1 ಕಾಮೆಂಟ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here