ಕಲಬುರಗಿ: ಆಳಂದ ಪಟ್ಟಣದ ವಾರ್ಡ್ ಸಂಖ್ಯೆ-2ರ ಸುಲ್ತಾನಪುರ ಗಲ್ಲಿ ಪ್ರದೇಶದಲ್ಲಿ ತಹಶೀಲ್ದಾರ ದಯಾನಂದ ಪಾಟೀಲ ಅವರು ಮಂಗಳವಾರ ಮನೆ-ಮನೆಗೆ ತೆರಳಿ ಗರ್ಭಿಣಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಮೊಟ್ಟೆ ವಿತರಿಸಿದರು.
ಕೊರೋನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಜನಸಂದಣಿ ತಪ್ಪಿಸಲು ಅಂಗನಾಡಿಗಳು ಮುಚ್ಚಲಾಗಿರುವ ಹಿನ್ನೆಲೆಯಲ್ಲಿ ಗರ್ಭಿಣಿ ಬಾಣಂತಿಯರ, ಶಿಶುಗಳ ಮತ್ತು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಪೌಷ್ಟಿಕಾಂಶವಿರುವ ಮೊಟ್ಟೆಗಳನ್ನು ತಾಲೂಕಿನಲ್ಲೆಡೆ ಅಂಗನವಾಡಿ ಕಾರ್ಯಕರ್ತೆಯರಿಂದ ವಿತರಿಸಲಾಗುತ್ತಿದೆ ಎಂದು ತಹಶೀಲ್ದಾರ ದಯಾನಂದ ಪಾಟೀಲ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಇದ್ದರು.