ಕೊರೊನಾ ಒಂದು ಕಾಣದ ಜೀವಿಯಾದ್ರು, ಎಲ್ಲರಿಗೂ ಜೀವದ ಬೇಲೆ ಕಲಿಸಿದೆ. ವಿದೇಶಕ್ಕೆ ಹಾರಿದ ಅದೇಷ್ಟೂ ಜನ ತಮ್ಮ ಮನೆ ಸಮಾರಂಭದಲ್ಲಿ ಭಾಗಿಯಾಗೊಕ್ಕೂ ಬರದವರೂ ಇಂದು ತಮ್ಮ ಗೂಡಿಗೆ ಸೇರಿದ್ದಾರೆ.
ಹಳ್ಳಿಯೆಂದರೆ ಅಸಢ್ಯವಾಗಿ ಮಾತನಾಡುತ್ತಿದ್ದವರು ಇಂದು ಹಳ್ಳಿ ಕಟ್ಟೆಗಳ ಮೇಲೆ ಕುಳಿತು ಹರಟೆ ಹೊಡಿಯುತ್ತಿದ್ದಾರೆ.
ಬೆಸಿಗೆ ರಜೆ ಬಂತೆದರೆ ವೆಕೆಷನ್ನಗಳ ಪ್ಯಾನ್ ಮಾಡುತ್ತಿದ್ದವರು ತಮ್ಮ ತಮ್ಮ ಮೂಲಗಳಿಗೆ ಬಂದ್ದಿದಾರೆ. ಅಜ್ಜ – ಅಜ್ಜಿ ಜೋತೆ ಮೊಮ್ಮಕ್ಕಳು ಖುಷಿಯಿಂದ ಕಾಲಕಳೆಯುತ್ತಿದ್ದಾರೆ.
ಎಲ್ಲರೂ ತಮ್ಮಲಿರುವ ಪ್ರತಿಭೆಯನ್ನು ಮತ್ತೆ ಶುರುಮಾಡಿದ್ದಾರೆ, ತಮ್ಮವರೊಂದಿಗೆ ಒಳ್ಳೆಯ ಸಮಯ ಕಳೆಯುತ್ತಿದ್ದಾರೆ. ಒಳ್ಳೆಯ ಅಡುಗೆಗಳನ್ನು ಮಾಡುವದನ್ನು ಕಲಿತ್ತಿದ್ದೆವೆ.
ಈ ಕಾಣದ ಜೀವಿಯೊಂದಿಗಿನ ನಮ್ಮ ಹೋರಾಟ ಆದಷ್ಟೂ ಬೇಗ ಮುಕ್ತಾಯಗೊಳ್ಳಿ ಆದರೆ ನಾವು ಈ ಕೊರೊನಾದಿಂದ ಕಲಿತ ಪಾಠವನ್ನು ಯಾವತ್ತು ಮರಿಯಬಾರದು ಮತ್ತು ನಮ್ಮ ನೆಲ ಮತ್ತು ಮೂಲಗಳಗೆ ನಮ್ಮಿಂದ ಆದಷ್ಟು ಸಮಯವನ್ನು ನೀಡಬೇಕು.