ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ! ಧರೆ ಹತ್ತಿ ಉರಿದಡೆ ನಿಲಬಹುದೇ?

0
77

ಪ್ರಕೃತಿಯಲ್ಲಾಗುವ ಪ್ರತಿ ಬದಲಾವಣೆಗಳು ನಮ್ಮ ಬದುಕಿಗೆ ಪಾಠ ಕಲಿಸುತ್ತವೆ. ಅದಕ್ಕೆ ಸಾಕ್ಷಿ ಎಂಬಂತೆ ಇತ್ತೀಚಿಗೆ ಕೆರೊನಾ ಎಂಬ ಹೆಮ್ಮಾರಿ ಇಡೀ ವಿಶ್ವವನ್ನೇ ಕಾಡುತ್ತಿದೆ.

“ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ, ಧರೆ ಹತ್ತಿ ಉರಿದಡೆ ನಿಲಬಹುದೆ?” ಎನ್ನುವ ಅಣ್ಣ ಬಸವಣ್ಣನವರ ವಚನದ ಸಾರದಂತೆ ನಮ್ಮಲ್ಲಿನ ಸ್ವಾರ್ಥ, ದುರಾಸೆಯಿಂದಾಗಿ ಇಂಥದೆಲ್ಲವೂ ಮೇಲಿಂದ ಮೇಲೆ ಸಂಭವಿಸುತ್ತಿವೆ ಎನಿಸುತ್ತಿವೆ.

Contact Your\'s Advertisement; 9902492681

ಕೊರೊನಾ ವೈರಸ್ ಗೆ ಯಾವುದೇ ಔಷಧಿಯನ್ನು ಈವರೆಗೆ ಕಂಡು ಹಿಡಿದಿಲ್ಲವಾದ್ದರಿಂದ ಜಗತ್ತಿನ ಎಲ್ಲ ದೇಶಗಳು ಲಾಕ್ ಡೌನ್ ಘೋಷಿಸಿ ಸಾಮಾಜಿಕ ಅಂತರ ಕಾಪಾಡುವುದು, ಮೇಲಿಂದ ಮೇಲೆ ಸಾಬೂನಿನಿಂದ ಕೈ ತೊಳೆಯುವುದು, ಮುಖಗವಸು (ಮಾಸ್ಕ್) ಧರಿಸುವುದನ್ನು ಅಲ್ಲಿನ ಸಾರ್ವಜನಿಕರಿಗೆ ಹೇಳಿಕೊಡುತ್ತಿವೆ.

ಕೊರೊನಾ ಸೋಂಕಿಗೆ ಒಳಗಾಗದಿರುವುದಕ್ಕೆ ಕಡ್ಡಾಯವಾಗಿ ನಾವೆಲ್ಲರೂ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮವಾಗಿದೆ.‌ ಇಂತಹ ಕೊರೊನಾ ನಮಗೆ ಅನೇಕ ರೀತಿಯ ಪಾಠ ಕಲಿಸಿದೆ.

ಸ್ವಚ್ಛಮೇವ ಜಯತೆ ಎನ್ನುವಂತೆ ಸ್ವಚ್ಛತೆ ಕಾಪಾಡಿಕೊಂಡು ಬರಬೇಕು ಎಂಬುದನ್ನು ನಮಗೆ ಮತ್ತೊಮ್ಮೆ ಎಚ್ಚರಿಕೆ ನೀಡಿದೆ. ಎಲ್ಲರೂ ಒಂದೆಡೆ ಕೂಡಿ ಹಾಡಿ ನಲಿಯುವುದರಿಂದ ಏಕತಾನತೆಯಿಂದ ಕೂಡಿದ ಜೀವನದಲ್ಲಿ ರೀ ಪ್ರೆಶ್ ತಂದಿದೆ ಎಂದು ಹೇಳಬಹುದು.

ಹೋಟೆಲ್ ತಿಂಡಿ-ತನಿಸುಗಳಿಗಿಂತ ಮನೆಯಲ್ಲಿ ಮಾಡಿದ ಅಡುಗೆಯೇ ಶ್ರೇಷ್ಠ ಎಂಬುದನ್ನು ಸಾರಿ ಹೇಳಿದೆ. ಮಿತ ಖರ್ಚಿನಿಂದಾಗಿ ಹಿತವಾದ ಜೀವನ ನಡೆಸಬಹುದು ಎಂಬುದನ್ನು ತೋರಿಸಿಕೊಟ್ಟಿದೆ. ಮನೆಯಲ್ಲಿ ಎಲ್ಲರೂ ಸೇರಿ ಉಪಹಾರ, ತಿಂಡಿ, ಊಟ ಮಾಡುವುದು ನೆಮ್ಮದಿ ತಂದಿದೆ.

ಕೊರೊನಾ ತಂದಿಟ್ಟ ಈ ಸಂಕಷ್ಟದ ದಿನಗಳಲ್ಲಿ ನಾನು ಇನ್ನಷ್ಟು ಬರವಣಿಗೆಯಲ್ಲಿ ತೊಡಗುವಂತೆ ಮಾಡಿದೆ. ಹೀಗೆ ಕೊರೊನಾದಿಂದ ಸಾಕಷ್ಟು ಸಾಧಕಗಳಿರುವುದರ ಜೊತೆಗೆ ಜಗತ್ತಿನ ಮನುಜರಿಗೆ ಜೀವ ಕಂಟಕವಾಗಿರುವುದು ಕೂಡ ಇದರ ಬಾಧಕವಾಗಿದೆ.


ವಿಜಯಲಕ್ಷ್ಮೀ ಶಿ.‌ಕೌಟಗೆ, ಬೀದರ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here