ಸರಕಾರಿ ನೌಕರರು ಕೇಂದ್ರ ಸ್ಥಾನದಲ್ಲಿರಲಿ: ಮಾನಪ್ಪ ಹಡಪದ.

0
55

ಶಹಾಪುರ: ಸರಕಾರಿ ನೌಕರರು ನಿಯೋಜನೆಗೊಂಡಿರುವ ಸ್ಥಳ ಬಿಟ್ಟು ಯಾರೂ ಬೇರೆ ಜಿಲ್ಲೆಗಳಿಗೆ ಹೋಗಬಾರದು ಎಂದು ಸಾಮಾಜಿಕ ಕಾರ್ಯಕರ್ತ ಮಾನಪ್ಪ ಹಡಪದ ಗೋಗಿ ಹೇಳಿದರು.

ಕೆಲವೊಂದು ಸರ್ಕಾರಿ ನೌಕರರು ಕಲಬುರ್ಗಿ ಯಾದಗಿರಿ ಶಹಾಪುರದಿಂದ ದಿನಾಲೂ ಓಡಾಟ ಮಾಡುತ್ತಿದ್ದಾರೆ ಇದನ್ನು ಸಂಪೂರ್ಣವಾಗಿ ತಡೆಗಟ್ಟಬೇಕು ಇಲ್ಲದಿದ್ದರೆ ಸರ್ಕಾರದ ನಿಯಮ ಉಲ್ಲಂಘಿಸಿದಂತಾಗುತ್ತದೆ ಎಂದು ಹೇಳಿದರು.

Contact Your\'s Advertisement; 9902492681

ಮಹಾಮಾರಿ ಕರೋನಾ ವೈರಸ್ ಈಗಾಗಲೇ ಕಲಬುರಗಿಯಲ್ಲಿ ಬಹಳ ಸದ್ದು ಮಾಡುತ್ತಿದೆ ದಿನಾಲೂ ಕಲಬುರ್ಗಿಯಿಂದ ಶಹಾಪುರಕ್ಕೆ ಹಾಗೂ ಶಹಾಪುರದಿಂದ ಯಾದಗಿರಿಗೆ ಯಾದಗಿರಿಯಿಂದ ಕಲಬುರಗಿಗೆ ಅನಾವಶ್ಯಕವಾಗಿ ದಿನಾಲೂ ಓಡಾಟ ನಡೆಸುತ್ತಿದ್ದಾರೆ ತಮ್ಮ ಡ್ಯೂಟಿ ಮುಗಿಸಿಕೊಂಡು ಬರುತ್ತಿದ್ದಾರೆ.

ಇಂಥವರಿಂದಲೂ ಕೂಡಾ ಕರೋನಾ ಸೋಂಕು ಹರಡಬಹುದು ಆದ್ದರಿಂದ ಸರಕಾರಿ ನೌಕರರು ಕೇಂದ್ರ ಸ್ಥಾನದಲ್ಲಿರಬೇಕು ಎಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಸಾಮಾಜಿಕ ಕಾರ್ಯಕರ್ತ ಮಾನಪ್ಪ ಹಡಪದ ಗೋಗಿ ಅಂಗಲಾಚಿ ಬೇಡಿಕೊಂಡರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here