ಪುಸ್ತಕ ಓದುವುದನ್ನು ಕಲಿಸಿದ ಕರೋನಾ

0
87

ಮುಂಜಾನೆ ಅವ್ವ ರೊಟ್ಟಿ ಮಾಡುವ ಸಮಯದಲ್ಲಿ ನನಗೆ ಮುಟ್ಟಿಗಿ ಮಾಡಿಕೊಡುತ್ತಿದ್ದಳು ಅದನ್ನು ತಿನ್ನುವದರೊಂದಿಗೆ ಆರಂಭವಾಗು ದಿನಚರಿ ಮಧ್ಯಾಹ್ನ ನುಚ್ಚು ಮಜ್ಜಿಗೆ ಊಟ ,ಸಂಜೆ ಚಹಾ ,ಭಜಿ ರಾತ್ರಿ ಅನ್ನ ಸಾರು ಈಗೆ ಎರಡೂ ಮೂರು ದಿನಗಳು ಹೇಗೋ ಕಳದವು ನಂತರದ ದಿನಗಳಲ್ಲಿ ತುಂಬಾನೆ ಬೇಜಾರು ಟಿವಿ ನೋಡುವುದು ಕೂಡ ಬೇಜಾರಾಗಿ ಅಲ್ಲೆ ಇದ ಕಪಾಟು ಕಡೆ ಕಣ್ಣು ಹಾಯಿಸಿದೆ ಅಲ್ಲಿ ಎಷ್ಟೊ ವರ್ಷಗಳಿಂದ ಸಂಗ್ರಹಿಸಿದ ಪುಸ್ತಕ ಭಂಡಾರ ಎಂದು ನಾನು ಅಪ್ಪ ಸಂಗ್ರಹಿಸಿದ ಪುಸ್ತಕಗಳನ್ನು ಕಪಾಟು ತೆರದು ನೋಡಿದವ ನಲ್ಲ ಪಸ್ತಕಗಳೆಂದರೆ ನನಗೂ ಎಣ್ಣೆ ಸಿಗೆಕಾಯಿ ಅನ್ನುವಂಗ್ ಇದವನ್ನು ಆದರೆ ಈ ಕರೋನಾ ಬಂದು ಲಾಕಡೌನ ನಿಂದಾಗಿ ಹೊರಗಡೆ ಹೋಗುವ ಹಾಗಿಲ್ಲ ಟಿವಿ ನೋಡಿ ಬೇಜಾರಾಗಿ ಕೊನಗೆ ಅಪ್ಪನು ಸಂಗ್ರಹಿಸಿದ ಪುಸ್ತಕದ ಕಡೆಗೆ ಗಮನ ಸೆಳೆಯಿತು.

ಅಲ್ಲಿ ಮೊದಲು ಸಿಕ್ಕ ಪುಸ್ತಕ ” ಸುತ್ತಾಟದ ಸೃತಿ” ಅದನ್ನು ಮುಗಿಸಿದ ನಂತರ ಲೋಕ ಶಕ್ತಿ ಸಂಘಟಕ ಲೋಹಿಯಾ, ವಿಚಾರ ಕ್ರಾಂತಿಗೆ ಆಹ್ವಾನ (ಕುವೆಂಪು) ಪೆರಿಯಾರ್ ಅವರ ಬರಹ ಮತ್ತು ಬಾಷಣ ಸಂಗ್ರಹ ಈಗೆ ಹತ್ತು ಹಲವು ಪುಸ್ತಕಗಳನ್ನು ಓದುತ್ತಾ ಹೋದಂತೆಲ್ಲಾ ಇವಾಗ ರಾತ್ರಿ ಮಲಗುವ ಮುಂಚೆ ನಾಲ್ಕಾರು ಪುಟಗಳನ್ನು ಓದಿದ ನಂತರವೆ ಮಲಗುವ ಹಾಗಾಗಿದೆ ಇದರ ಜೊತೆಗೆ ಮಕ್ಕಳಿಗೆ ಸಿಹಿ ತಿಂಡಿ ತಿನಿಸುಗಳು ಮಾಡಿಕೊಡುವುದು ಮಕ್ಕಳೊಂದಿಗೆ ಆಟವಾಡುವುದು ರಿಂದ ಮತ್ತೆ ನನ್ನ ಬಾಲ್ಯದ ದಿನಗಳನ್ನು ನೆನಪಿಸಿತು ಈ ಕರೋನಾ.


ಸಾಯಿಕುಮಾರ ಇಜೇರಿ, ಶಹಾಪುರ
Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here