ಸುರಪುರ: ಕೊರೊನಾ ಮುಂಜಾಗ್ರತೆ ಅಂಗವಾಗಿ ಜಿಲ್ಲಾಧಿಕಾರಿಗಳ ಆದೇಶದಂತೆ ಸುರಪುರ ನಗರಸಭೆ ವ್ಯಾಪ್ತಿಯ ಎಲ್ಲಾ 30 ವಾರ್ಡ್‍ಗಳು ಧಾರಕ ವಲಯ (ಕಂಟೋನ್ಮೆಂಟ್ ಝೋನ್) ಎಂದು ಘೋಷಣೆ ಮಾಡಿದ್ದಾರೆ ಎಂದು ನಗರಸಭೆ ಪೌರಾಯುಕ್ತ ಜೀವನ ಕುಮಾರ ಕಟ್ಟಿಮನಿ ತಿಳಿಸಿದರು.
ನಗರದ ಸತ್ಯಂಪೇಟೆಯ ಎಲ್ಲಾ ರಸ್ತೆಗಳು ಬಂದ್ ಮಾಡಿಸುವ ಸಂದರ್ಭದಲ್ಲಿ ಮಾತನಾಡಿ,ಕೊರೊನಾ ಸೊಂಕು ನಿತ್ಯವು ಹರಡುತ್ತಿರುವುದು ಹೆಚ್ಚುತ್ತಿರುವುದರಿಂದ ದೇಶದಾದ್ಯಂತ ಲಾಕ್‍ಡೌನ್ ಘೋಷಣೆಯಾಗಿದೆ.ಆದರೆ ಯಾದಗಿರಿ ಜಿಲ್ಲೆಯಲ್ಲಿ ಇದುವರೆಗು ಯಾವುದೆ ಕೊರೊನಾ ಪ್ರಕರಣ ಕಂಡುಬರದ ಕಾರಣ ಇದೇ ಮುಂದುವರೆಯಲು ಜಿಲ್ಲಾಧಿಕಾರಿಗಳು ನಮ್ಮ ಸುರಪುರ ನಗರಸಭೆ ವ್ಯಾಪ್ತಿಯನ್ನು ಕಂಟೋನ್ಮೆಂಟ್ ಝೋನೆ ಎಂದು ಘೋಷಿಸಿ ಎಲ್ಲಾ ವಾರ್ಡಿನ ಜನತೆ ಮನೆಯಿಂದ ಹೊರ ಬರದೆ ಮನೆಯಲ್ಲಿದ್ದು ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ದೂರವಾಣಿ ಮೂಲಕ ತಿಳಿಸಿದಲ್ಲಿ ನಮ್ಮ ನಗರಸಭೆ ಸಿಬ್ಬಂದಿ ಅಥವಾ ನಾವು ನೇಮಕಗೊಳಿಸಿದ ಸ್ವಯಂ ಸೇವಕರು ತಮ್ಮ ಮನೆ ಬಾಗಿಲಿಗೆ ತಲುಪಿಸಲಿದ್ದಾರೆ ಎಂದು ತಿಳಿಸಿದರು.
ಇದಕ್ಕೆ ಜನರು ಸಹಕರಿಸಬೇಕು ಎಂದು ಮನವಿ ಮಾಡಿದ ಅವರು ಆಯಾ ವಾರ್ಡಿನ ಜನರ ಸೇವೆ ಮಾಡಲಿರುವ ನಮ್ಮ ಸಿಬ್ಬಂದಿ ಅಥವಾ ಸ್ವಯಂ ಸೇವಕರ ದೂರವಾಣಿ ಸಂಖ್ಯೆಗಳನ್ನು ಎಲ್ಲರ ಮನೆ ಬಾಗಿಲಿಗೆ ತಲುಪಿಸಲಾಗುವುದು ಎಂದು ತಿಳಿಸಿದರು.
ಇಂದು ಪ್ರಾಯೋಗಿಕವಾಗಿ ವಾರ್ಡ್ ನಂಬರ್ 1,2,14,30 ಮತ್ತು 31ರಲ್ಲಿ ಆರಂಭಿಸಲಾಗುತ್ತಿದ್ದು ನಂತರ ಎಲ್ಲಾ ವಾರ್ಡುಗಳಲ್ಲಿ ಕಂಟೋನ್ಮೆಂಟ್ ಝೋನ್ ವಿಸ್ತರಿಸಲಾಗುವುದು ಎಂದು ತಿಳಿಸಿದರು.ಜನರು ಇದಕ್ಕೆ ಸಹಕರಿಸಬೇಕು ಈ ಆದೇಶ ಉಲ್ಲಂಘಿಸಿ ಹೊರಗೆ ಬಂದವರ ಮೇಲೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಪರಿಸರ ಅಭಿಯಂತರ ಸುನಿಲ ನಾಯಕ,ವ್ಯವಸ್ಥಾಪ ಯಲ್ಲಪ್ಪ ನಾಯಕ ಹಾಗು ಸಿಬ್ಬಂದಿಗಳಿದ್ದರು.