ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಂದ ಮನೆ ಮನೆಗೆ ಆರೋಗ್ಯ ಸಮೀಕ್ಷೆ

0
70

ಕಲಬುರಗಿ: ನಗರದ ಆದರ್ಶ ಕಾಲೋನಿ, ಬಡೆಪೂರ , ಬಸವೇಶ್ವರ ಕಾಲೋನಿ ಹಾಗೂ ಶಿವ ಮಂದಿರ ಬಡಾವಣೆಗಳಲ್ಲಿ ಪ್ರತಿ ದಿನ ಬೆಳಿಗ್ಗೆಯಿಂದ ಮಧ್ಯಾಹ್ನ ವರೆಗೆ ಆರೋಗ್ಯ ಇಲಾಖೆಯ ಸಿಬ್ಬಂದಿಯವರು ಮನೆ ಮನೆಗೆ ತೆರಳಿ ಸರ್ವೆ ಕಾರ್ಯಾ ನಡೆಸಿದ್ದರು.

ಪ್ರತಿ ಸಿಬ್ಬಂದಿಗೆ 50 ಮನೆಯಂತೆ ಸಮೀಕ್ಷೆ ನಡೆಸಲಾಗುತ್ತಿದ್ದು, ಮನೆಯಿಂದ ಹೊರಗಡೆ ಹೊಗಬಾರದು ಮನೆಯಲ್ಲಿ ಇರಬೇಕೆಂದು ತಿಳಿಸಿ, ಊರಿನಿಂದ ಬಂದವರಿಗೆ ಅವಕಾಶ ಕೊಡಬರದು, ಯಾರಾದರು ಬೇರೆ ಊರಿನಿಂದ ಮನೆಗೆ ಬಂದಲ್ಲಿ ನಮ್ಮ ಗಮನಕ್ಕೆ ತನ್ನಿ ಎಂದು ತಾಕೀತು ಮಾಡಿದರು.

Contact Your\'s Advertisement; 9902492681

ಹಿರಿಯರು- ವೃದ್ದರು , ಮಕ್ಕಳು ಮನೆಯಿಂದ ಹೊರ ಬರದಂತೆ , ಸೊಷೀಲ್ ಡಿಸ್ಟೇನ್ಸ್,  ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಈ ವೇಳೆಯಲ್ಲಿ ಹಿರಿಯ ಆರೋಗ್ಯ ಮೇಲ್ವಿಚಾರಕ ಯಶವಂತ ಪಾಟೀಲ್,  ಡಿ ಟಿ ಸಿ ಜಿಲ್ಲಾ ಮೇಲ್ವಿಚಾರಕ ಮಂಜುನಾಥ ಕಂಬಾಳಿಮಠ, ಭೀಮಣ್ಣ ಮಲಗತ್ತಿ, ಮಲ್ಲಣ್ಣ ಮಾಲಿಪಾಟೀಲ್, ಶಿವು ಪಾಟೀಲ್, ಅರ್ ಬಿ ಎಸ್ ಕೆ, ಸ್ಟಾಪ್ ನರ್ಸ್ ಗಳಾದ ರೇಖಾ ಅಂಕಲಗಿ, ಮೇರಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here