ರಂಗಂಪೇಟೆಯ ಸಾವಿರಾರು ಕುಟುಂಬಗಳಿಗೆ ಶುದ್ಧ ಕುಡಿಯುವ ನೀರಿನ ಸಮಸ್ಯೆ

0
206

ಸುರಪುರ: ನಗರದ ರಂಗಂಪೇಟೆಯ ತಿಮ್ಮಾಪುರ, ಮಂಗಲಬಜಾರ,ದೀವಳಗುಡ್ಡ ,ಹಸನಾಪುರ ಕ್ಯಾಂಪ್ ಮತ್ತಿತರೆ ಸ್ತಳಗಳಲ್ಲಿ ಜನತೆ ಶುದ್ಧ ಕುಡಿಯುವ ನೀರಿಲ್ಲದೆ ಪರದಾಡುವಂತಾಗಿದೆ.ರಂಗಂಪೇಟೆಯಲ್ಲಿ ಎರಡು ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು ಎರಡರಲ್ಲಿಯೂ ಅಂತರ್ಜಲ ಕುಸಿತದಿಂದ ನೀರಿನ ಮಟ್ಟ ಕಡಿಮೆಯಾಗಿ ಕೊಡ ನೀರು ತರಲು ಇಡೀ ದಿನ ಕಾಯುವಂತಾಗುತ್ತಿದೆ ಎಂದು ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ತಿಮ್ಮಾಪುರದಲ್ಲಿ ಕಳೆದ ಎರಡು ವರ್ಷದ ಹಿಂದೆ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಲಾಗಿತ್ತು ಆದರೆ ಆರಂಭಗೊಂಡ ಎರಡು ತಿಂಗಳಲ್ಲಿಯೆ ಅದು ಕೆಟ್ಟು ನಿಂತಿದ್ದು ಅಂದಿನಿಂದ ರಿಪೇರಿ ಮಾಡಿಸದೆ ಹಾಗೆಯೇ ಬಿಟ್ಟಿದ್ದು ಈಗ ಬೇಸಿಗೆಯಾಗಿದ್ದರಿಂದ ಜನರಿಗೆ ಹೆಚ್ಚು ಕುಡಿಯುವ ನೀರು ಬೇಕು,ಆದರೆ ಶುದ್ಧ ಕುಡಿಯುವ ನೀರು ಸಿಗದೆ ಪರದಾಡಲಿದ್ದೇವೆ ಎಂದು ದೀವಳಗುಡ್ಡದ ನಾಗರಿಕ ಗಾಳೆಪ್ಪ ಹಾದಿಮನಿ ಬೇಸರ ತೋಡಿಕೊಳ್ಳುತ್ತಿದ್ದಾರೆ.

Contact Your\'s Advertisement; 9902492681

ಸಾವಿರಾರು ಕುಟುಂಬಗಳು ಶುದ್ಧ ಕುಡಿಯಲು ನೀರಿಲ್ಲದೆ ತೊಂದರೆ ಪಡುತ್ತಿದ್ದೆವೆ.ಜಿಲ್ಲಾಧಿಕಾರಿಗಳು ಕೂಡಲೆ ನಮ್ಮ ಮನವಿಯನ್ನು ಗಮನಿಸಿ ಕುಡಿಯಲು ಶುದ್ಧ ಕುಡಿಯುವ ನೀರು ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ವಿನಂತಿಸುತ್ತೇವೆ. – ರಾಜು ಪುಲ್ಸೆ ರಂಗಂಪೇಟೆ

ನಮ್ಮದೆ ಒಂದು ಬೋರ್ ಇದೆ ಅದರಲ್ಲಿ ನೀರುಕೂಡ ಇದೆ,ನಗರಸಭೆಯ ಅಧಿಕಾರಿಗಳಿಗೆ ಮನವಿ ಮಾಡಿ ಇದೇ ನಮ್ಮ ಬೋರ್‍ಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಅಳವಡಿಸಿ ಜನರಿಗೆ ಕುಡಿಯಲು ಅನುಕೂಲವಾಗಲಿದೆ ಎಂದರೆ ನಮ್ಮ ಮನವಿಯನ್ನು ನಗರಸಭೆಯವರು ಕೇಳುತ್ತಿಲ್ಲ ಎನ್ನುತ್ತಿದ್ದಾರೆ.

ಪಕ್ಕದ ಸತ್ಯಂಪೇಟೆಯಲ್ಲಿ ಖಾಸಗಿಯವರ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ನೀರು ತರಲು ಹೋದರೆ ಅಲ್ಲಿಯ ಜನರು ಕೊರೊನಾ ಸೊಂಕು ಬರಬಹುದು ಆದ್ದರಿಂದ ನಮ್ಮೂರಿಗೆ ನೀರಿಗೆ ಬರಬೇಡಿ ಎನ್ನುತ್ತಿದ್ದಾರೆ.ಹೀಗಾದರೆ ನಾವು ಕುಡಿಯುವ ನೀರಿಗೆ ಏನು ಮಾಡುವುದು ಎಂದು ನೋವಿನಿಂದ ನುಡಿಯುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here