ರಾವೂರ್ ಜಾತ್ರೆ ಪ್ರಕರಣ: ಪಿಎಸ್ಐ ಪುನಃ ನೇಮಕಕ್ಕೆ ವಿವಿಧ ಸಂಘಟಗಳು ಆಗ್ರಹ

0
196

ಕಲಬುರಗಿ: ಲಾಕ್ಡೌನ್ ಉಲ್ಲಂಘಿಸಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರ್ ಗ್ರಾಮದಲ್ಲಿ ನಡೆದ ರಥೋತ್ಸವ ಹಿನ್ನೆಲೆ ಅಮಾನತುಗೊಂಡಿರುವ ಪಿಎಸ್ಐ ವಿಜಯಕುಮಾರ್ ಬಾವಗಿ ಅವರನ್ನು ಕರ್ತವ್ಯಕ್ಕೆ ಪುನಃ ನೇಮಕ ಮಾಡುವಂತೆ ವಾಡಿ ಪಟ್ಟಣದ ವಿವಿಧ ಸಂಘಟನೆಗಳು ಆಗ್ರಹಿಸಿವೆ.

ಕರ್ನಾಟಕ ದಲಿತ ಸಂಘರ್ಷ ಸಮಿತಿ, ಮಾದಿಗ ದಂಡೋರ, ಸೇರಿದಂತೆ ಯುವ ಹೋರಾಟಗಾರರು ಪಿಎಸ್ಐ ವಿಜಯಕುಮಾರ್ ಅಮಾನತನ್ನು ಖಂಡಿಸಿದ್ದಾರೆ. ಪಿಎಸ್ಐ ವಿಜಯಕುಮಾರ್ ಜಾತ್ರೋತ್ಸವಕ್ಕೆ ಎರಡು ದಿನಕ್ಕೂ ಮುಂಚಿತವಾಗಿಯೇ ಸಮಿತಿಯೊಂದಿಗೆ ಸಭೆ ನಡೆಸಿ ಜಾತ್ರೆ ನಡೆಸದಂತೆ ತಾಕೀತು ಮಾಡಿದರು.

Contact Your\'s Advertisement; 9902492681

ಜಾತ್ರೋತ್ಸವ ಸಮಿತಿ ಸದಸ್ಯರು ಕೂಡ ಜಾತ್ರೆ ನಡೆಸುವುದಿಲ್ಲ ಎಂದು ಭರವಸೆ ನೀಡಿದ್ದರು. ಅಲ್ಲದೆ ಸಮಿತಿಯ ಸದಸ್ಯರು ಪತ್ರಿಕಾಗೋಷ್ಠಿ ನಡೆಸಿ ಜಾತ್ರೋತ್ಸವ ರದ್ದುಪಡಿಸುವುದಾಗಿ ಹೇಳಿಕೆಯನ್ನು ಕೊಟ್ಟಿದ್ದರು. ಆದರೆ ಏಕಾಏಕಿ ಯಾರಿಗೂ ಗೊತ್ತಾಗದಂತೆ ಬೆಳ್ಳಗ್ಗೆ ಆರು ಗಂಟೆಗೆ ನೂರಾರು ಸಂಖ್ಯೆಯಲ್ಲಿ ಜನ ಸೇರಿಸಿ ರಥೋತ್ಸವ ಮಾಡುವ ಮೂಲಕ ನಿಷೇದಾಜ್ಞೆಯನ್ನು ಉಲ್ಲಂಘಿಸಿದ್ದಾರೆ.

ಪಿಎಸ್ಐ ವಿಜಯಕುಮಾರ್ ಭಾವಗಿಯವರು ಲಾಕ್ಡೌನ್ ಪ್ರಾರಂಭವಾಗಿದ್ದರಿಂದ ವಾಡಿ ಪೋಲಿಸ ಠಾಣೆ ವ್ಯಾಪ್ತಿಗೆ ಬರುವ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕೋರಾನಾ ವೈರಸ್ ಕುರಿತು ಜಾಗೃತಿ ಮೂಡಿಸುವಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು. ರಾವೂರ್ ಘಟನೆಯಲ್ಲಿ ಯಾರೋ ಮಾಡಿದ ತಪ್ಪಿಗೆ ಯಾರು ಶಿಕ್ಷೆ ಅನುಭವಿಸುವಂತಾಗಿದೆ. ಉದ್ದೇಶಪೂರ್ವಕವಾಗಿ ವಿಜಯಕುಮಾರ್ ಭಾವಗಿ ಅವರನ್ನು ಬಲಿಪಶು ಮಾಡಲಾಗಿದೆ.

ಆದರಿಂದ ಎಸ್ ಪಿ ಯಡಾ ಮಾರ್ಟಿನ್ ಅವರು ಪ್ರಕರಣ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಹಾಗೂ ಲಾಕ್ ಡೌನ್ ಉಲ್ಲಂಘಗಿಸಿದ ಜಾತ್ರ್ಯೋತ್ಸವ ಸಮಿತಿ ಸದಸ್ಯರನ್ನು ಬಂಧಿಸಿ ಜೈಲಿಗಟ್ಟಬೇಕು, ಯಾವ ತಪ್ಪು ಮಾಡದೆ ಶಿಕ್ಷೆ ಅನುಭವಿಸುತ್ತಿರುವ ಪಿಎಸ್ಐ ವಿಜಯಕುಮಾರ್ ಬಾವಗಿ ಅವರ ಅಮಾನತು ಆದೇಶವನ್ನು ಕೊಡಲೆ ಹಿಂಪಡೆದು ಕರ್ತವ್ಯಕ್ಕೆ ಮರು ಹಾಜರುಪಡಿಸುವಂತೆ ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here