ಕಲಬುತಗಿ: ಲಾಕ್ ಡೌನ್ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದ ಕೂಲಿ ಕಾರ್ಮಿಕರು ಮಹಾರಾಷ್ಟ್ರ ಗೋವಾ ಹಾಗೂ ಆಂದ್ರಪ್ರದೇಶಗಳಲ್ಲಿದ್ದು ವಾಪಸ್ ಊರಿಗೆ ಬರಲು ಸೌಕರ್ಯವಿಲ್ಲದೇ ಹಾಗೂ ಊಟ ವಸತಿ ಸೌಲಭ್ಯವಿಲ್ಲದ್ದರಿಂದ ಅಲ್ಲಿಯೂ ಇರಲಾಗದೆ ಕಷ್ಟಪಡುತ್ತಿದ್ದಾರೆ. ಈ ಕುರಿತು ಕ್ರಮ ಕೈಗೊಳ್ಳುವಂತೆ ಸರ್ವ ಪಕ್ಷಗಳ ಸಭೆಯಲ್ಲಿ ಒತ್ತಾಯಿಸುವುದರ ಜೊತೆಗೆ ಎರಡು ಬಾರಿ ಸರಕಾರಕ್ಕೆ ಪತ್ರಬರೆದರೂ ಪ್ರಯೋಜನವಾಗಿಲ್ಲ ಎಂದು ಶಾಸಕರಾದ ಪ್ರಿಯಾಂಕ್ ಖರ್ಗೆ ಸರಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೆರೆ ರಾಜ್ಯದಲ್ಲಿ ಸಿಲುಕಿರುವ ಕಾರ್ಮಿಕರ ಮಾಡಿ ಕಳಿಸಿರುವ ವಿಡಿಯೋ ಒಂದನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿರುವ ಶಾಸಕರು, ಬೆಂಗಳೂರಿನಲ್ಲಿ ಸಿಲುಕಿದ್ದ ಕಲಬುರ್ಗಿ ಮೂಲದ ಕಾರ್ಮಿಕರಿಗೆ ನನ್ನ ಕೈಲಾದ ಸಹಾಯ ಮಾಡಿದ್ದೇನೆ. ಹೊರಾರಾಜ್ಯಗಳಲ್ಲಿ ಸಿಲುಕಿರುವ ನಮ್ಮ ರಾಜ್ಯದ ಜನರನ್ನು ಈ ಕೂಡಲೇ ರಾಜ್ಯಕ್ಕೆ ಕರೆಸಿಕೊಳ್ಳುವಂತೆ ಸಿಎಂ ಯಡಿಯೂರಪ್ಪ ಅವರಿಗೆ ಆಗ್ರಹಿಸಿದ್ದಾರೆ.
ಉತ್ತರಾಖಂಡ್ ರಾಜ್ಯದಲ್ಲಿ ಹಾಗೂ ಮುಂಬೈನಲ್ಲಿದ್ದ ಗುಜರಾತ್ ಮೂಲದ ಜನರನ್ನು ವಿಶೇಷ ಬಸ್ ಹಾಗೂ ವಿಮಾನದ ಮೂಲಕ ಕರೆಸಿಕೊಂಡ ಗೃಹ ಸಚಿವ ಅಮಿತ್ ಶಾ ಹಾಗೂಸಿಎಂ ವಿಜಯ್ ರೂಪಾನಿ ಅವರು ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಕೂಡಾ ಅವರು ಬರೆದುಕೊಂಡಿದ್ದಾರೆ.