ಕೊರೊನಾ ಜಗತ್ತಿನಲ್ಲಿ ಯಾವ ವಿಶ್ವವಿದ್ಯಾಲಯ ಹೇಳಿಕೊಡದ ಸಂಕಷ್ಠದ ದಾರಿಯನ್ನು ಹಾಗೂ ಸಂಬಂಧಗಳ ಗಟ್ಟಿ ಬಂಧನವನ್ನು ನೀಡಿದೆ.
ಮಕ್ಕಳೊಂದಿಗೆ ಮಕ್ಕಳಾಗಿ ಬೆರೆಯಲು ಅನುವು ಮಾಡಿತು.ಮನೆಯಲ್ಲಿ ಮೂವರು ಮಕ್ಕಳೊಂದಿಗೆ ಊಟ,ಆಟ,ಪಾಠ,ಸಂಗೀತ, ಚಿತ್ರ ಕಲೆ ,ಯೋಗ,ಧ್ಯಾನ ಹಾಗೂ ದೇಶಿಯ ಆಟಗಳನ್ನು ಆಡುವುದು,ಒಗಟು ಬಿಡಿಸುವುದು ಇತ್ಯಾದಿಯನ್ನು ಕಲಿಸಿತು.
ವಯೋವೃದ್ಧರಾದ ನನ್ನವ್ವ,ನನ್ನಪ್ಪನ ಸಂಪೂರ್ಣ ಸೇವೆ ಮಾಡಲು ಸಾಧ್ಯವಾಯಿತು.ನಡೆದಾಡಲು ಬಾರದಂತಾಗಿರುವ ನನ್ನಪ್ಪನಿಗೆ ಸ್ನಾನ,ಊಟ ಇತ್ಯಾದಿ ಮಾಡಿಸುವ ಸಹಜತೆ,ಸಹನತೆ ಕಲಿಸಿತು.ನನ್ನವ್ವ ಆಸ್ಪತ್ರೆಯಲ್ಲಿ ಐಸಿಸಿಯು ನಲ್ಲಿದ್ದರೂ ಅವಳಲ್ಲಿಗೆ ಹೋದಾಗ ವಾರಗಟ್ಟಲೆ ಅವಳ ಸೇವೆಯನ್ನು ರಜೆಯ ಒತ್ತಡವಿಲ್ಲದೆ ನಿರಾಳವಾಗಿ ನಿರ್ವಹಿಸುವುದನ್ನು ಕಲಿಸಿತು.
ಈ ಕೊರೊನಾ ಎಲ್ಲಿಯೂ ಅಲೆಯದಂತೆ ಆಸ್ಪತ್ರೆಯ ಐಸಿಸಿಯುನಲ್ಲಿರುವ ಎನ್ನ ತಾಯಿಯ ಸೇವೆಯನ್ನು ಮಾಡಿದೆವು.ಅವ್ವನ ಧನ್ಯತೆಯೂ ಅಂತಿಮ ನಮನದೊಂದಿಗೆ ಕಣ್ಣೆದುರಿಗೆ ಅವ್ವನ ಜೀವ ಬಯಲಲ್ಲಿ ಬಯಲಾಗಿ ಅವಳಿಲ್ಲದ ಈ ಜಗ ಬಯಲು ಬಟಾಬಯಲು ಎಂದೆನ್ನಿಸುತ್ತಿದೆ. ಇದೆಲ್ಲ ಕೊರೊನಾ ಕಲಿಸಿದ ಪಾಠ.