ಕಲಬುರಗಿ: ನಗರದ 20ನೇ ವಾರ್ಡ್ ನ ಮಿಸ್ಬಾ ನಗರ್ ಬಿಟ್ ನಲ್ಲಿ ಕೋವಿಡ್-19 ಸ್ವಯಂ ಸೇವಕರು ಬಡಾವಣೆಯ ಮನೆ ಮನೆಗೆ ತೆರಳಿ ಕೊರೋನಾ ರೋಗ್ಯ ಸೋಂಕು ಹರಡುವಿಕೆ ಬಗ್ಗೆ ಜಾಗೃತಿ ಮೂಡಿಸಿದರು.
ಮಿಸ್ಬಾ ನಗರ, ಐಕಾನ್ ವೆಲ್ಲಿ, ಅಜ್ಮೀರ್ ಕಾಲೋನಿ, ಪಟೇಲ್ ಕಾಲೋನಿ, ಜಿದ್ದಾ ಕಾಲೋನಿ, ಪ್ರದೇಶದ ಮನೆ ಮನೆಗೆ ಹೋಗಿ ಮಹಾಮಾರಿ ರೋಗದ ಬಗ್ಗೆ ಜನರಿಗೆ ತಿಳಿಹೇಳಿ, ಮನೆಯಿಂದ ಹೊರಗಡೆ ತಿರುಗಾಡ ಬೇಡಿ ಮತ್ತು ಮಾಸ್ಕ್ ಹಾಕಿಕೊಳ್ಳಬೇಕು ಎಂದು ಮನವಿ ಮಾಡಿದರು.
ಜನರ ಪ್ರಾಣ ರಕ್ಷಣೆ ಮತ್ತು ರೋಗ ನಿಯಂತ್ರಣಕ್ಕೆ ಪೊಲೀಸರು, ವೈದ್ಯರು, ನರ್ಸ್ ಗಳು ಹಾಗೂ ಆಶಾ ಕಾರ್ಯಕರ್ತರು ಹಗಲು-ರಾತ್ರಿ ದುಡಿಯುತ್ತಿದ್ದಾರೆ ಅವರಿಗೆ ಬೆಂಬಲ ನೀಡಿ ಎಂದು ಈ ಸಂದರ್ಭದಲ್ಲಿ ಸಮಾಜ ಸೇವಕರ ಕಾರ್ಯಪಡೆ ಈ ಮನವಿ ಮಾಡಿದರು.
ಈ ವೇಳೆಯಲ್ಲಿ ನಯಾ ಸವೇರಾ ಸಂಘಟನೆಯ ಅಧ್ಯಕ್ಷರಾದ ಮೋದಿನ ಪಟೇಲ್ ಅಣಬಿ, ಸಲೀಂ ಅಹ್ಮದ್ ಚಿತಾಪುರಿ, ರಿಯಾಜ್ ಪಟೇಲ್ ಬಿಲ್ವಾರ್, ಜಿಲಾನ್ ಗುತ್ತೇದಾರ್, ಅತಿಕ್ ಉರ್ ರಹ್ಮಾನ್, ಉಮ್ರಿ ಅಮಿರ್ ಅಲಿ, ಮಹಿಬೂಬ್ ನೇತೃತ್ವದ ಕಾರ್ಯ ನಡರಯಿತು.