ಕಲಬುರಗಿ: ಲಾಕ್ ಡೌನ್ ನಿಯಮ ಉಲ್ಲಂಘಿಸಿ ನೂರಾರು ಜನರು ಸೇರಿ ಸಾಮಾಜಿಕ ಅಂತರ ಪಾಲಿಸದೇ ಅಂತ್ಯಕ್ರಿಯೆ ಕಾರ್ಯ ನಡೆಸಿರುವ ಘಟನೆ ನಗರದ ಇಸ್ಲಾಮಾಬಾದ್ ಕಾಲೋನಿಯ ರುದ್ರಭೂಮಿಯಲ್ಲಿ ನಿನ್ನೆ ಪೂರ್ವಹ್ನ ನಡೆದಿದೆ.
ಘಟನೆಯ ಅಂತ್ಯಕ್ರಿಯೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲಾತಾಣವಾದಲ್ಲಿ ವೈರಲ್ ಆಗುತ್ತಿದ್ದಂತೆ ರೋಜಾ ಪೊಲೀಸರು ತನಿಖೆ ನಡೆಸಿ ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.
ನಿನ್ನೆ ನಗರದ ಇಸ್ಲಾಮಾಬಾದ್ ಕಾಲೋನಿಯ ನಿವಾಸಿಯಾದ ರಾಮ್ ಗೌಳಿ ಎಂಬುವರು ಮೃತಪಟ್ಟಿದ್ದು, ಪೂರ್ವಹ್ನ ವೇಳೆಯಲ್ಲಿ ಲಾಕ್ ಡೌನ್ ನಡುವೆಯು ಕೆಂಚಬಸವೇಶ್ವರ ರುದ್ರಭೂಮಿಯಲ್ಲಿ ಸುಮಾರು 80 ಕ್ಕೂ ಹೆಚ್ಚು ಜನ ಸಮೂಹಿಕವಾಗಿ ಸೇರಿರುವುದು ಕಂಡು ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 8 ಜನರನ್ನು ವಶಕ್ಕೆ ಪಡೆದು ಪೊಲೀಸರು ತನಿಖೆ ನಡೆಸಲಾಗುತ್ತಿದ್ದಾರೆ.
ಕಲಬುರಗಿಯಲ್ಲಿ ಕೊರೋನಾ ಸೋಂಕಿಗೆ ಮೂರು ಜನ ಮೃತಪಟ್ಟಿದ್ದು, 22 ಸೋಂಕು ಪೀಡಿತರು ಹಾಗೂ ನೂರಾರು ಜನರಿಗೆ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.
ಮಹಾಮಾರಿ ಕೊರೋನಾ ತಟೆಗಟ್ಟುವ ನಿಟ್ಟಿನಲ್ಲಿ ದೇಶದ್ಯಂತ ಲಾಕ್ ಡೌನ್ ಮತ್ತು ಜಿಲ್ಲಾದ್ಯಂತ ಕಲಂ 144 ಜಾರಿ ಇದ್ದರು ಸಹ ಜರನು ಸರಕಾರದ ಕಣ್ಣು ತಪ್ಪಿಸಿ ನೂರಾರು ಮಂದಿ ಸೇರುವ ಘಟನೆಗಳು ಬೆಳಕಿಗೆ ಬುರುತ್ತಿದೆ.
ಇದರಿಂದ ಸಾರ್ವಜನಿಕ ವಲಯದಲ್ಲಿ ಆತಂಕ ಸೃಷ್ಠಿಯಾಗಿದೆ. ಅಂತ್ಯಕ್ರಿಯೆ ಪ್ರಕರಣದ ಕುರಿತು ರೋಜಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.