ಯಾದಗಿರಿ: ಲಾಕ್ ಡೌನ್ ಗೆ ಆದೇಶಕ್ಕೆ ಒಂದು ತಿಂಗಳಿಂದ ಜನರು ಯಾವುದೇ ಕೂಲಿ ಕೆಲಸವಿಲ್ಲದೆ ಕೈಯಲ್ಲಿ ಹಣ ಇಲ್ಲದಂತಾಗಿದೆ. ರಾಜ್ಯ ಸರಕಾರ ಅಕ್ಕಿ ಮಾತ್ರ ನೀಡುತ್ತಿದ್ದು, ಜನರಿಗೆ ಉಪಯೋಗವಾಗುವ ಆಹಾರ ಪದಾರ್ಥಗಳು, ತರಕಾರಿ, ದಿನಬಳಕೆಗೆ ಬಳಸುವ ವಸ್ತುಗಳನ್ನು ಖರೀದಿಸಲು ಹಣವಿಲ್ಲದೆ ಪರದಾಡುವಂತಾಗಿದೆ.
ಈ ಪರಿಸ್ಥಿತಿಯಲ್ಲಿ ಸಗರನಾಡು ಎಂದು ಖ್ಯಾತಿ ಹೊಂದಿರುವ ಶಾಹಪೂರ ತಾಲೂಕಿನ ದಾವತ್ ಎ ಇಸ್ಲಾಮಿ ಕಮಿಟಿ ವತಿಯಿಂದ ಬಡಜನರಿಗೆ, ಹಾಗೂ ಕೂಲಿ ಕಾರ್ಮಿಕರಿಗೆ ಸಹಾಯ ಮಾಡಲು ಮುಂದಾಗಿದೆ.
ಮಹಾಮಾರಿ ಕೊರೋನಾವನ್ನು ಎದುರಿಸಲು ಮತ್ತು ಪ್ರಧಾನಿ ಮೋದಿ ಲಾಕ್ ಡೌನ್ ಕಟ್ಟು ನಿಟ್ಟಾಗಿ ಪಾಲಿಸಲು ಬಡ ಹಾಗೂ ಕೂಲಿ ಕಾರ್ಮಿಕರ ಪ್ರತಿ ಮನೆಗಳ ಕುಟುಂಬಕ್ಕೆ 1, 200 ರೂ ಯಂತೆ 50 ಮನೆಗಳ ಅದಕ್ಕಿಂತ ಹೆಚ್ಚು ಕುಟುಂಬಗಳಿಗೆ ಹಣ ನೀಡುವ ಮುಖಾಂತರ ಸಹಾಯ ಮಾಡಲು ದಾವತ್ ಇಸ್ಲಾಮಿ ಕಮಿಟಿ ಮುಂದಾಗಿದೆ.
ಈ ಸಂದರ್ಭದಲ್ಲಿ ಮೂಲಾನ ಇಬ್ರಾಹಿಂ ಅತ್ತಾರಿ, ಅಶ್ರಫ್ ಅತ್ತಾರಿ, ಸಯೇದ್ ಸಫೀಯುದ್ದೀನ್ ಸರ್ಮತ್, ಸದ್ದಾಂ ಅತ್ತಾರಿ, ಅಲ್ತಾಫ್ ಅತ್ತಾರಿ, ಶೋಯಿಬ್ ಅತ್ತಾರಿ ಹಾಗೂ ಕಮಿಟಿಯ ಸದ್ಯಸರು ಇದ್ದರು.