ಪ್ರೊ. ಆನಂದ ತೇಲ್ತುಂಬ್ಡೆ ಮತ್ತು ಗೌತಮ್ ನವ್ಲಖ ಬಿಡುಗಡೆ ಎಸ್.ಯು.ಸಿ.ಐ ಪಕ್ಷ ಆಗ್ರಹ

0
51

ಕಲಬುರಗಿ: ಪ್ರೊ. ಆನಂದ ತೇಲ್ತುಂಬ್ಡೆ ಮತ್ತು ಶ್ರೀ ಗೌತಮ್ ನವ್ಲಖ ಅವರನ್ನು ಭೀಮಾ ಕೊರೇಗಾಂವ್ ಪ್ರಕರಣದಲ್ಲಿ, ಕಟ್ಟುಕಥೆಯ ಆರೋಪದಲ್ಲಿ ರಾಷ್ಟ್ರೀಯ ತನಿಖಾ ದಳವು (ಎನ್.ಐ.ಎ) ಬಂಧಿಸಿರುವುದು ಖಂಡಿಸಿ, ಪ್ರೊ. ಆನಂದ ತೇಲ್ತುಂಬ್ಡೆ ಮತ್ತು ಗೌತಮ್ ನವ್ಲಖ ಅವರನ್ನು ತಕ್ಷಣವೇ ಬಿಡುಗಡೆ ಮಾಡಬೇಕೆಂದು ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷ ಆಗ್ರಹಿಸಿದೆ.

ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್.ವಿ.ದಿವಾಕರ್ ಪತ್ರಿಕಾ ಪ್ರಕಟಣೆ ನೀಡಿ, ಪ್ರತಿಭಟನೆಯ ದನಿಯನ್ನು ಉಡುಗಿಸಿ ಅವರಲ್ಲಿ ಭಯ ಸೃಷ್ಟಿಸುವುದು ಫ್ಯಾಸಿಸ್ಟ್ ಕ್ರಮವಾಗಿದೆ. ಕೋವಿಡ್ ೧೯ ಮಹಾ ಸಾಂಕ್ರಾಮಿಕದ ಸಂದರ್ಭದಲ್ಲೂ ಅವರುಗಳನ್ನು ಬಂಧಿಸಿರುವುದು ನಿಜಕ್ಕೂ ಖಂಡನಾರ್ಹ ಸಂಗತಿ. ಆನಂದ್ ತೇಲ್ತುಂಬ್ಡೆ ಅವರು ನಾಗರಿಕ ಹಕ್ಕುಗಳಿಗಾಗಿ, ಜಾತಿ ತಾರತಮ್ಯ ಮತ್ತು ಹಿಂದುತ್ವವಾದಿ ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಹೋರಾಡುತ್ತಿದ್ದ ಓರ್ವ ಖ್ಯಾತ ಬುದ್ಧಿ ಜೀವಿಯಾಗಿದ್ದರೆ ಎಂದು ತಿಳಿಸಿದ್ದು, ಪ್ರೊ. ಆನಂದ ತೇಲ್ತುಂಬ್ಡೆ ಮತ್ತು ಶ್ರೀ ಗೌತಮ್ ನವ್ಲಖ ಅವರನ್ನು ತಕ್ಷಣವೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here