ಕಲಬುರಗಿ: ಲಾಕ್ ಡೌನ್‌ದಿಂದಾಗಿ ತುತ್ತು ಅನ್ನಕ್ಕೂ ಕಂಗಾಲಾಗಿರುವ ನಗರದ ಆಳಂದ ರಸ್ತೆಯಲ್ಲಿರುವ ಮಹಾತ್ಮ ಗಾಂಧಿ ಕುಷ್ಠ ರೋಗಿಗಳ ಕಾಲನಿಯ ನಿವಾಸಿಗಳಿಗೆ ಜಿ-೯೯ ಮತ್ತು ಜಿ-೫೫ ಗೆಳೆಯರ ಬಳಗದಿಂದ ಕೊಡ ಮಾಡಿರುವ ಕಿರಾಣಿ ಸಾಮಾನುಗಳಿರುವ ಕಿಟ್ (ರೇಷನ್)ಗಳನ್ನು ಸಂಸದ ಡಾ.ಉಮೇಶ ಜಾಧವ, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರzವಾಡಗಿ, ಪ್ರಧಾನ ಕಾರ್ಯದರ್ಶಿ ಲಿಂಗರಾಜ ಬಿರಾದಾರ ಅವರು ಭಾನುವಾರ ಸಂಜೆ ವಿತರಣೆ ಮಾಡಿದರು.
ಲೆಪ್ರಸಿ ಕಾಲನಿಯಲ್ಲಿರುವ ಸುಮಾರು ೮೫ ಜನರಿಗೆ ೫ ಕೆಜಿ ಅಕ್ಕಿ, ೫ ಕೆಜಿ ಗೋಧಿ ಹಿಟ್ಟು, ತಲಾ ೨ ಕೆಜಿಯಂತೆ ಸಕ್ಕರೆ, ಕೆಜಿ ರವಾ, ಕೆಜಿ ಅವಲಕ್ಕಿ, ಉಪ್ಪು, ಅಡುಗೆ ಎಣ್ಣೆ ಪ್ಯಾಕೇಜ್‌ಗಳು, ಜೀರಿಗೆ, ಸಾಸಿವೆ, ಖಾರದಪುಡಿ, ಬಿಸ್ಕತ್ ಮೊದಲಾದ ಅವಶ್ಯಕ ವಸ್ತುಗಳಿರುವ ಕಿಟ್‌ಗಳನ್ನು ಕುಷ್ಟ ರೋಗಗಿಳಿU ವಿತರಿಸಲಾಯಿತು. ಈ ಮೂಲಕ ಬಳಗದ ಸಮಾಜಮುಖಿ ಕಾಯಕ ಮುಂದುವರೆದಿದೆ.
ಸಮಾಜಮುಖಿ ಕೆಲಸಗಳಿಗೆ ಹೆಸರು ಮಾಡಿರುವ ಮತ್ತು ಸದಾ ಸಂಕಷ್ಟದಲ್ಲಿರುವವರಿಗೆ ಸ್ಪಂದಿಸುವ ಕೆಲಸ ಮಾಡುವ ಕಲಬುರಗಿಯ ಜಿ-೯೯ ಮತ್ತು ಜಿ-೫೫ ಗೆಳೆಯರ ಬಳಗದ ಪ್ರಮುಖರಾಗಿರುವ ಸಾಮಾಜಿಕ ಕಾರ್ಯಕರ್ತರಾದ ಶರಣು ಪಪ್ಪಾ ಹಾಗೂ ಅವರ ಬಳಗದ ಕಾರ್ಯವನ್ನು ಸಂಸದ ಡಾ.ಜಾಧವ ಮತ್ತು ಶಾಸಕ ಬಿ.ಜಿ.ಪಾಟೀಲ್ ಶ್ಲಾಘಿಸಿದರು. ಕಳೆದ ಮಾ.೨೪ರಿಂದಲೇ ತೊಂದರೆಯಲ್ಲಿರುವರಿಗೆ ವಿತರಿಸುತ್ತಿರುವುದು ಮಾದರಿಯಾಗಿದೆ. ನಿಮ್ಮ ಕೆಲಸ ಇನ್ನಿತರರಿಗೆ ಮಾದರಿಯಾಗಿದೆ ಎಂದರು.
ಕರೊನಾ ಕಟ್ಟಿ ಹಾಕಲು ಸರ್ಕಾರ ಲಾಕ್‌ಡೌನ್ ಜಾರಿಗೊಳಿಸಿದ್ದರಿಂದ ಅನೇಕರು ಕೆಲಸವಿಲ್ಲದೆ ತೀವ್ರ ತೊಂದರೆಗೆ ಸಿಲುಕಿದ್ದಾರೆ, ಶ್ರಮಿಕರು ಬಡವರು ಉಪವಾಸದಿಂದ ಇರಬಾರದು ಎಂಬ ಉzಶದಿಂದ ಬಡವರು, ಅಸಹಾಯಕರನ್ನು ಗುರುತಿಸಿ ಕಿರಾಣಿ ಸಾಮಾನುಗಳನ್ನು ವಿತರಣೆ ಮಾಡುವ ಕೆಲಸ ಮಾಡುತ್ತಿzವೆ. ಈ ಕಾಯಕಕ್ಕೆ ಜಿ-೯೯ ಮತ್ತು ಜಿ-೫೫ ಸ್ನೇಹಿತರ ಜತೆಗೆ ಹಲವರು ಸಹಕಾರ ನೀಡುತ್ತಿದ್ದಾರೆ. ಇದರಿಂದರಿಂದಾಗಿ ಕೆಲವರಿಗೆ ನೆರವಾಗಲು ಸಾಧ್ಯವಾಗುತ್ತಿದೆ ಎಂದು ಶರಣು ಪಪ್ಪಾ ಮತ್ತು ಶರಣು ಮತ್ತಿಮೂಡ, ಪ್ರಶಾಂತ ಗುಡ್ಡಾ, ಶಿವರಾಜ ಖೂಬಾ, ಸಿzಶ್ವರ ಗಂಪಾ, ಮಲ್ಲಿಕಾರ್ಜುನ ನಾಗೂರ ಹೇಳಿದರು.
ತೊಂದರೆಯಲ್ಲಿದ್ದವರಿಗೆ ಕಿರಾಣಿ ಕಿಟ್ ನೀಡಿದ್ದರಿ ಎಂದು ಸ್ವೀಕರಿಸಿದವರು ಕೃತಜ್ಞತೆ ಸಲ್ಲಿಸಿದರು. ಇದನ್ನು ಕಂಡು ಸಂಸದರು ಹಾಗೂ ಬಿ.ಜಿ.ಪಾಟೀಲ್‌ರು ಭಾವುಕರಾದರು. ಕಿಟ್ ವಿತರಣೆ ವೇಳೆಯಲ್ಲಿ ಬಳಗದ ಮುಖಂಡರಾದ , ಅಮಿತ್ ಜೈನ್, ಶರಣು ಮತ್ತಿಮೂಡ, ಶರಣು ಭಾಗೋಡಿ, ಎಲ್.ಬಿ.ಕುಲಕರ್ಣಿ, ಪ್ರಭಾವ ಪಟಣಕರ್, ಪ್ರಶಾಂತ ಗುಡ್ಡಾ, ಸಿzಶ್ವರ ಗಂಪಾ, ಅರುಣ ನಾವದಗಿ, ರವಿ ಕಾಗಿ, ನಿಜಲಿಂಗಯ್ಯ ಅಗ್ಗಿಮಠ, ರಾಹುಲ ಕಾಗಿ, ವಿನಾಯಕ ತಗಡಗರ, ಸಿದೇಶ್ವರ ಗಂಪಾ, ಶಿವರಾಜ ಖೂಬಾ, ಮಲ್ಲಿಕಾರ್ಜುನ ನಾಗೂರ, ಪ್ರಭಾವ ಪಟ್ಟಣಕರ್ ಮೊದಲಾದವರಿದ್ದರು.