ಆಟೋ ಚಾಲಕರ ನೆರವಿಗೆ ಧಾವಿಸಲು ಸಂಘದ ಮನವಿ

0
67

ಕಲಬುರಗಿ: ಕೊರೋನಾ ಮಹಾಮಾರಿಗೆ ದೇಶದ್ಯಂತ ಲಾಕ್ ಡೌನ್ ಘೋಷಿದ್ದು, ಆಟೋ ಚಾಲಕರು ಮತ್ತು ಮಾಲೀಕರು ತೀರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರಕಾರ ಚಾಲಕರಿಗೆ ತಿಂಗಳ ಭತ್ತೆ ಮತ್ತು ಆಹಾರ ಪದಾರ್ಥಗಳು ನೀಡಬೇಕೆಂದು ಚಿತ್ತಾಪುರ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷರಾದ ಮಹೇಶ್ ಎಸ್ ಕಾಶಿ ಮುಖ್ಯಮಂತ್ರಿಗಳಿಗೆ ಆಗ್ರಹಿಸಿದ್ದಾರೆ.

ಅವರು ಈ ಕುರಿತು ಪತ್ರ ಬರೆದು, ಲಾಕ್ ಡೌನ್ ಘೋಷಣೆಯಿಂದ ಆಟೋ ಚಾಲಕರು ಮತ್ತು ಮಾಲೀಕರು ತಿಂಗಳ ಬಾಡಿಗೆ, ಬ್ಯಾಂಕ್ ಕಂತು ಹಾಗೂ ಕುಟುಂಬ ನಿರ್ವಹಣೆಗಾಗಿ ದವಸ ಧಾನ್ಯ ಮತ್ತು ಇನ್ನಿತರ ಸೌಲಭ್ಯ ವ್ಯವಸ್ಥೆಗಾಗಿ ಪರದಾಡುವಂತಾಗಿದೆ. ರಾಜ್ಯ ಸರಕಾರವು ಆಂಧ್ರಪ್ರದೇಶ, ದೆಹಲಿ ಮತ್ತು ಕೆರಳ ಸರಕಾರ ಮಾದರಿಯಲ್ಲಿ ರಾಜ್ಯದ ಚಾಲಕರಿಗೆ ಪರಿಹಾರ ಘೋಷಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

Contact Your\'s Advertisement; 9902492681

ಸಂಕಷ್ಟದಲ್ಲಿರುವ ಚಾಲಕರಿಗೂ ಸಹ ಪರಿಹಾರ ಕಿಟ್ ಗಳು ಮತ್ತು ಆಹಾರ ಸಾಮಾಗ್ರಿಗಳನ್ನು ವಿತರಸಿ ನೆರವಿಗೆ ಧಾವಿಸಬೇಕೆಂದು ಆನಂದ ಕುಮಾರ ಕಾಶಿ ಈ ಪತ್ರದಲ್ಲಿ ಕೋರಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here