ಬಸವ ಜಯಂತಿ,ರಂಜಾನ್ ಹಬ್ಬ ಮನೆಯಲ್ಲಿ ಆಚರಿಸಿ: ಡಿವೈಎಸ್ಪಿ ವೆಂಕನಗೌಡ ಪಾಟೀಲ್

0
117

ಚಿತ್ತಾಪುರ: ಮಹಾಮಾರಿ ಕೊರೊನ್ ವೈರಸ್ ದೇಶಾದ್ಯಂತ ತೀವ್ರಗತಿಯಲ್ಲಿ ವ್ಯಾಪಿಸುತ್ತಿದ್ದು, ಲಾಕ್ ಡೌನ್ ನಿಯಮವನ್ನು ಪಾಲಿಸಿ ಬಸವ ಜಯಂತಿ ಮತ್ತು ರಂಜಾನ್ ಹಬ್ಬವನ್ನು ಸರಳವಾಗಿ ಆಚರಿಸುವಂತೆ ಡಿವೈಎಸ್ಪಿ ವೆಂಕನಗೌಡ ಪಾಟೀಲ್ ತಿಳಿಸಿದರು.

ಬಸವ ಜಯಂತಿ ಮತ್ತು ರಂಜಾನ್ ಹಬ್ಬದ ಪ್ರಯುಕ್ತ ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕರೆಯಲಾಗಿದ್ದ ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಬಸವ ಜಯಂತಿ ಮತ್ತು ರಂಜಾನ್ ಹಬ್ಬವನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ಲಾಕ್ ಡೌನ್ ಉಲ್ಲಂಘನೆಯಾಗದಂತೆ ನಿಮ್ಮ ನಿಮ್ಮ ಮನೆಗಳಲ್ಲಿ ಆಚರಿಸಿ‌. ಒಂದು ವೇಳೆ ನಿಯಮ ಉಲ್ಲಂಘಿಸಿ ಆಚರಣೆಗೆ ಮುಂದಾದರೆ ಅಂತವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

Contact Your\'s Advertisement; 9902492681

ಕೊರೊನ್ ಲಾಕ್ ಡೌನ್ ಹಿನ್ನಲೆ ಈ ಬಾರಿ ರಂಜಾನ್ ಉಪವಾಸ ಪ್ರಾರ್ಥನೆಯನ್ನು ಮನೆಯಲ್ಲಿ ಆಚರಿಸಿ. ಯಾವುದೇ ಕಾರಣಕ್ಕೂ ಮಸೀದಿಗಳಲ್ಲಿ ಗುಂಪು ಸೇರಿ ಪ್ರಾರ್ಥನೆ ಮಾಡುವುದು ಉಪವಾಸ ಬಿಡುವುದು ಮಾಡದೆ ಸರಳವಾಗಿ ನಿಷೇಧಾಜ್ಞೆ ಉಲ್ಲಂಘನೆ ಮಾಡದಂತೆ ಸರ್ಕಾರದ ಆದೇಶ ಪಾಲಿಸಿ ಹಬ್ಬ ಆಚರಿಸುವ ಮೂಲಕ ಕೊರೊನ್ ವೈರಸ್ ನಿಯಂತ್ರಿಸಲು ಸಹಾಕರಿಸಿ ಎಂದು ಸಿಪಿಐ ಪಂಚಾಕ್ಷರಿ ಸಾಲಿಮಠ ತಿಳಿಸಿದರು.

ಈ ವೇಳೆಯಲ್ಲಿ ತಾಲೂಕು ತಹಶೀಲ್ದಾರ್ ಉಮಾಕಾಂತ್ ಹಳ್ಳೆ, ಪುರಸಭೆ ಅಧಿಕಾರಿ ಮನೋಜ್ ಕುಮಾರ್ ಗುರಿಕಾರ್, ಪಿಎಸ್ಐ ಶ್ರೀಶೈಲ್ ಅಂಬಾಟಿ, ಅಬಕಾರಿ ನಿರೀಕ್ಷಕ ಓಂಪ್ರಕಾಶ್ ಮಠಪತಿ, ನಾಗರಾಜ್ ಬಂಕಲಗಿ, ವಿನೋದ್ ಗುತ್ತೇದಾರ್, ಮಲ್ಲಿಕಾರ್ಜುನ್ ರೆಡ್ಡಿ, ಮುಕ್ತಾರ್ ಪಟೇಲ್, ಆನಂದ್ ಪಾಟೀಲ್, ಅಂಬರೀಶ್ ಸುಲೆಗಾಂವ್, ಮಲ್ಲಿಕಾರ್ಜುನ್ ಕಾಳಗಿ, ಬಸವರಾಜ್ ಬೊಮ್ನಳ್ಳಿ, ಪ್ರಭು ಗಂಗಾಣಿ, ಶೀಲಾ ಕಾಶಿ, ಬಾಬು ಕಾಶಿ, ಶಿವರಾಜ್, ಹಣಮಂತ ಸಂಕನೂರು, ಮಹಮದ್ ಅಕ್ಬರ್, ಮಹಮ್ಮದ್ ಮಶಾಕ್, ಸಲಿಂ ಸಾಬ್, ಇಕ್ಬಾಲ್ ಸಾಬ್, ಸೇರಿದಂತೆ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here