ಕಲಬುರಗಿ; ಕೇಂದ್ರ ಸರಕಾರದ ನಿರ್ಲಕ್ಷ್ಯದಿಂದಾಗಿಯೇಕೊರೋನ ಸೋಂಕು ದೇಶವ್ಯಾಪಿ ಹರಡಿ, ಹಲವು ರೀತಿಯ ಸಾವು ನೋವುಗಳಿಗೆ ಕಾರಣವಾಗಿದೆಎಂದುಕರ್ನಾಟಕ ಪ್ರಾಂತರೈತ ಸಂಘ ಹಾಗೂ ಸಿಐಟಿಯು ಆರೋಪಿಸಿದೆ.
ಸಿಐಟಿಯು-ಕನಾಟಕ ಪ್ರಾಂತರೈತ ಸಂಘ ಕಲಬುರಗಿಜಿಲ್ಲಾ ಸಮಿತಿ ವತಿಯಿಂದ ಭಾಷಣ ಸಾಕು-ವೇತನ ಬೇಕು, ಉದ್ಯೋಗ ಉಳಿಸಿ-ಆರ್ಥಿಕತೆ ರಕ್ಷಿಸಿ ಹಾಗೂ ಆಹಾರ ಒದಗಿಸಿ-ಬದುಕು ಉಳಿಸಿ ಎಂಬ ಘೋಷ ವಾಕ್ಯದೊಂದಿಗೆ ಮನೆಯಿಂದಲೇ ಚಳವಳಿ ಆರಂಭಿಸಿದ್ದು, ಸಂಘಟನೆಯ ಮುಖಂಡರು, ಕಾರ್ಯಕರ್ತರು ಭಿತ್ತಿಪತ್ರಗಳನ್ನು ಹಿಡಿದು ಮೂಲಭೂತ ಅಗತ್ಯಗಳ ಸುಧಾರಣೆಗಾಗಿ ಹಕ್ಕೋತ್ತಾಯ ಮಾಡುತ್ತಿದ್ದಾರೆ.
ದೇಶದಲ್ಲಿಕೊರೋನ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆ ಕೇರಳ ಸರಕಾರಜನವರಿಯಿಂದಲೇ ವಿಮಾನ ನಿಲ್ದಾಣಗಳಲ್ಲಿ ವಿದೇಶದಿಂದ ಬಂದವರಿಗೆಉಷ್ಣಾಂಶ ತಪಾಸಣೆ ಮತ್ತು ಕೋವಿಡ್-೧೯ರ ಲಕ್ಷಣಗಳ ತಪಾಸಣೆ ನಡೆಸಿ ಶಂಕಿತರನ್ನು ಪತ್ಯೇಕ ವಾಸ ಮಾಡುವಂತೆ ಆದೇಶಿಸಲಾಯಿತು.ಆದರೆ, ಇದೇ ಹೊತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ದೆಹಲಿ ಚುನಾವಣೆ, ನಮಸ್ತೆ ಟ್ರಂಪ್ ಕಾರ್ಯಕ್ರಮಗಳ ಆಯೋಜನೆಯಲ್ಲಿಮಗ್ನರಾಗಿದ್ದರು.ಇದರಿಂದಾಗಿಯೇ ಕೋವಿಡ್-೧೯ ಮಹಾಮಾರಿದೇಶವ್ಯಾಪಿ ಹರಡಿತುಎಂಬುದು ಮೇಲ್ನೋಟಕ್ಕೆಕಾಣುತ್ತದೆಎಂದುಪ್ರಾಂತರೈತ ಸಂಘದ ಮುಖಂಡ ಮಾರುತಿ ಮಾನ್ಪಡೆ ಆರೋಪಿಸಿದ್ದಾರೆ.
ಕೇರಳ ಮಾದರಿಯಾಗಲಿ: ಕೇರಳ ಸರಕಾರವು ಎಂಬತ್ತೇಳು ಲಕ್ಷ ಕುಟುಂಬಗಳಿಗೆ ದಿನ ಬಳಕೆಯ ದಿನಸಿಗಳನ್ನು ೪ಕೆಜಿ ಬೇಳೆ, ೪೦ಕೆಜಿ ಅಕ್ಕಿ, ಜಿರಿಗೆ, ಸಾಸವೆ, ಹಲ್ಲುಜ್ಜುವ ಪೇಸ್ಟ್, ಬ್ರೆಷ್ ಸೇರಿದಂತೆಎಲ್ಲಆಹಾರ ಪದಾರ್ಥಗಳನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಗಳು ಸೇರಿ ಮನೆ ಮನೆಗೆ ನೀಡಿಜನತೆಯಲ್ಲಿಆತ್ಮವಿಶ್ವಾಸತುಂಬುವ ಕೆಲಸ ಮಾಡುತ್ತಿದ್ದಾರೆ. ಅದೇ ಮಾದರಿಯಲ್ಲಿಕರ್ನಾಟಕವನ್ನು ಒಳಗೊಂಡಂತೆ ದೇಶದಇತರೆ ರಾಜ್ಯಗಳಲ್ಲಿ ಮೂಲಭೂತ ಅಗತ್ಯಗಳನ್ನು ಮನೆ ಮನೆಗೆ ಕಳುಹಿಸುವಂತಹ ಕೆಲಸವಾಗಬೇಕೆಂದುಅವರು ಒತ್ತಾಯಿಸಿದ್ದಾರೆ.
ಹಕ್ಕೋತ್ತಾಯಗಳು:
-ಕೆಲಸದಅವಧಿಯನ್ನುಯಾವುದೇ ಸ್ವರೂಪದಲ್ಲಿ ೮ರಿಂದ ೧೨ಗಂಟೆಗೆ ಹೆಚ್ಚಿಸಬಾರದು.
-ಕೂಡಲೇ ವಲಸೆ ಕಾರ್ಮಿಕರಿಗೆ ಒಳ್ಳೆಯ ವಸತಿ ಮತ್ತುಆಹಾರಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕು.
-ಕೊರೋನತಡೆಗಟ್ಟಲು ಮುಂದಾಳುಗಳಾಗಿ ಕೆಲಸ ಮಾಡುತ್ತಿರುವಆರೋಗ್ಯ ಮತ್ತುಅಗತ್ಯ ಸೇವಾ ಕಾರ್ಯಕರ್ತರಿಗೆಕೂಡಲೇರಕ್ಷಣಾ ಪರಿಕರಗಳನ್ನು ಒದಗಿಸಬೇಕು. ಹಾಗೂ ಅವರ ವೇತನದಒಂದು ಪಟ್ಟುಹೆಚ್ಚು ನೀಡಬೇಕು.
-ಗುತ್ತಿಗೆ, ಹೊರಗುತ್ತಿಗೆಗೆದುಡಿಯುತ್ತಿರುವಕಾರ್ಮಿಕ ಮತ್ತು ನೌಕರರನ್ನು ಕೆಲಸದಿಂದತೆಗೆಯಬಾರದು.
-ಎಲ್ಲ ವರ್ಗದಕಾರ್ಮಿಕರ ವೇತನಖಾತರಿ ಪಡಿಸಬೇಕು.
-ವೇತನಕಡಿತ ಮಾಡುವಕಂಪೆನಿಯ ಮೇಲೆ ಕಾನೂನು ಕ್ರಮಜರುಗಿಸಬೇಕು.
-ಆದಾಯರಹಿತಅಸಂಘಟಿತಕ್ಷೇತ್ರದಕಾರ್ಮಿಕರಿಗೆ ತಿಂಗಳಿಗೆ ೭೫೦೦ರೂ.ಅವರ ಬ್ಯಾಂಕ್ ಖಾತೆಗಳಿಗೆ ೩ತಿಂಗಳ ಅವಧಿಗೆ ವರ್ಗಾಯಿಸಬೇಕು.
-ಸ್ವಸಹಾಯ ಸಂಘಗಳಿಗೆ ಬಡ್ಡಿರಹಿತ ಸಾಲ ನೀಡಬೇಕು.ಉದ್ಯೋಗಖಾತ್ರಿಯೋಜನೆಯನ್ನು ನಗರ ಪ್ರದೇಶಗಳಿಗೂ ವಿಸ್ತರಿಸಬೇಕು.