ಕಲಬುರಗಿ: ರಾಜ್ಯ ಸರ್ಕಾರವು ಕರ್ಫ್ಯೂಗೆ ಘೋಷಿದ ಹಿನ್ನೆಲೆಯಲ್ಲಿ ಇಂದು ಸಂಜೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ನಗರದ ವಿವಿಧ ಪ್ರಮುಖ ಪ್ರದೇಶ ಮಾರ್ಗದಲ್ಲಿ “ಧ್ವಜ ಮೆರವಣಿಗೆ ನಡೆಸಲಾಯಿತು.
ಜಿಲ್ಲೆಯಲ್ಲಿ ಕರ್ಫ್ಯೂ ಘೋಷಣೆಯಾಗಿದ್ದು, ಸಂಪೂರ್ಣವಾಗಿ ಕರ್ಫ್ಯೂ ಪಾಲನೆಯಾಗಬೇಕು ಇದ್ದಕಾಗಿ ಜನರು ತಮ್ಮ ಮನೆಗಳ ಒಳಗೆ ಉಳಿಯಲು ಮತ್ತು ಆಡಳಿತದೊಂದಿಗೆ ಸಹಕರಿಸುವ ಉದ್ದೇಶ ಈ ಮಾರ್ಚ್ ಹೊಂದಿದೆ ಎಂದು ತಿಳಿದುಬಂದಿದೆ.
ಪೊಲೀಸ್ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್ ಆಯುಕ್ತರಾದ ಕಿಶೋರ್ ಬಾಬು ಅವರ ನೇತೃತ್ವದಲ್ಲಿ ಕೆಎಸ್‌ಆರ್‌ಪಿ, ಡಿಎಆರ್, ನಾಗರಿಕ, ಸಂಚಾರ, ಬಟಾಲಿಯನ್, ನಾಗರೇಶ್ವರ ಶಾಲೆಯಿಂದ ನೆಹರು ಗುಂಜ್, ಮಿಜ್ಗೊರಿ, ಮುಸ್ಲಿಂ ಚೌಕ್, ಹಾಫ್ ಗುಂಬಾದ್, ಗಣೇಶ್ ಮಂದಿರ್, ಸೂಪರ್ ಮಾರ್ಕೆಟ್, ಆ್ಯಂಡ್ ಚೌಕ್ ಪೊಲೀಸ್ ಠಾಣೆ, ಈ ಫ್ಲ್ಯಾಗ್ ಮಾರ್ಚ್ ನಡೆಯಿತು.
ಈ ವೇಳೆಯಲ್ಲಿ ಎಸಿಪಿಯ ಮತ್ತು ಎಲ್ಲಾ ಪೊಲೀಸ್ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್, ಪಿಎಸ್‌ಐ, ಎಎಸ್‌ಐ, ಹೆಡ್ ಕಾನ್‌ಸ್ಟೆಬಲ್ ಉಪಸ್ತಿತರಿದ್ದರು.
ಈ ಸಂದರ್ಭದಲ್ಲಿ ಸ್ಥಳೀಯರು ಮುಸ್ಲಿಂ ಚೌಕ್ ಪ್ರದೇಶದಲ್ಲಿ ಪರೇಡ್ ನಿರತ ಪೊಲೀಸರ ಮೇಲೆ ಹೂವುಗಳಿಂದ ಸುರಿದು, ಚಪ್ಪಾಳೆ ತಟ್ಟುವ ಮುಲಕ ಮೆಚ್ಚುಗೆ ವ್ಯಕ್ತಪಡಿಸಿದರು.