ಕಲಬುರಗಿ: ಇಂದು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಗರದ ಗಂಜ್ ಪ್ರದೇಶದಿಂದ ನಡೆಸಿದ ಶಾಂತಿ ಮಾರ್ಚ್ ಕಾರ್ಯಪಡೆಗೆ ಕಲಬುರಗಿ ನಾಗರಿಕರ ಸಮಿತಿಯ ವತಿಯಿಂದ ನಗರದ ಮುಸ್ಲಿಂ ಚೌಕ್ ನಲ್ಲಿ ಪುಸ್ಪಾ ಅರ್ಚನೆ ಮಾಡುವ ಮೂಲಕ ಗೌರವಿಸಿದರು.
ಈ ವೇಳೆಯಲ್ಲಿ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಡಾ. ಮೊಹಮ್ಮದ್ ಅಜಗರ್ ಚುಲಬುಲ್, ರಹೀಮ್ ಮಿರ್ಚಿ, ಸೇರಿದಂತೆ ತಂಡ ಸದಸ್ಯರು ಇದ್ದರು.