ಕಲಬುರಗಿ: ಮಹಾಮಾರಿ ಕೊರೊನಾ ರೋಗ ಜಾತಿ, ಧರ್ಮ, ಬಡವ, ಶ್ರೀಮಂತ ಮತ್ತು ವಯಸ್ಸು ನೋಡಿ ಬರುವುದಿಲ್ಲ, ಮತ್ತು ವಯಸ್ಸು ನೋಡಿ ಕರುಣೆ ತೊರಲ್ಲ ಎಂಬುದಕ್ಕೆ ಇಂದು ಬಂದಿರುವ ವೈದ್ಯಕೀಯ ವರದಿ ಸಾಕ್ಷಿಯಾಗಿದೆ. ಜಿಲ್ಲೆಯ 4 ತಿಂಗಳ ಹಸುಗೂಸು ಮತ್ತು ತಾಯಿಗೆ ಸೇರಿ ಐವರಿಗೆ ವೈರಸ್ ಪತ್ತೆಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಕಲಬುರಗಿಯ ರೋಗ್ಯ ಸಂಖ್ಯೆ P329 ಸಂಪರ್ಕದಿಂದ ನಾಲ್ಕು ತಿಂಗಳ ಕುಸು ಮತ್ತು, ಮಗುವಿನ 26 ವರ್ಷದ ತಾಯಿ ಮತ್ತು 35 ವರ್ಷದ ಮಹಿಳೆಗೆ ಸೋಂಕು ತಗಲಿದೆ. ರೋಗ್ಯ ಸಂಖ್ಯೆ P222 ಸಂಪರ್ಕದಿಂದ 46 ವರ್ಷದ ಮಹಿಳೆ ಹರಡಿದ್ದು, ತೀವ್ರ ಉಸಿರಾಟದಿಂದ ಬಳಲುತ್ತಿದ್ದು 57 ವರ್ಷದ ವ್ಯಕ್ತಿಗೂ ಸಹ ಕೋವಿಡ್-19 ಸೋಂಕು ಧೃಢಪಟ್ಟಿದೆ.
ಜಿಲ್ಲೆಯಲ್ಲಿ ಕೊರೋನಾ ಪೀಡಿತರ ಸಂಖ್ಯೆ ಭಾರಿ ಏರಿಕೆ ಕಾಣುತ್ತಿದ್ದು, ಜನರು ಎಚ್ಚರ ವಹಿಸುವುದು ಅಗತ್ಯವಾಗಿದೆ. ಜಿಲ್ಲೆಯಲ್ಲಿ ಇವರೆಗೆ ಸೋಂಕು ಪೀಡಿತರ ಸಂಖ್ಯೆ 35ಕ್ಕೆ ತಲುಪಿದ್ದು, ಪ್ರತಿ ದಿನ ಸಂಖ್ಯೆ ಹೆಚ್ಚುತ್ತಿದೆ.
ಸದ್ಯ ಪೀಡಿತರೆಲ್ಲರನ್ನು ಕಲಬುರಗಿ ಇ.ಎಸ್.ಇ.ಸಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರೋಗಿಗಳ ಸಂಪರ್ಕದ ಬಗ್ಗೆ ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತ ಮಾಹಿತಿ ಪಡೆಯುತ್ತಿದೆ.