ಲಾಕ್‌ಡೌನ್ ಉಲ್ಲಂಘಿಸಿ ಹೊರಗೆ ಬರದೆ ಮನೆಯಲ್ಲಿಯೆ ರಂಜಾನ್ ಆಚರಿಸಿ: ಚೇತನ್

0
73

ಸುರಪುರ: ಕೊರೊನಾ ವೈರಸ್ ಎಂಬುದು ಮಾಹಾ ಮಾರಿಯಾಗಿ ಜಗತ್ತನ್ನೆ ಕಾಡುತ್ತಿದೆ ಆದ್ದರಿಂದ ಎಲ್ಲರು ಮನೆಯಿಂದ ಹೊರಗೆ ಬರದೆ ಮನೆಯಲ್ಲಿಯೆ ಇರುವುದು ಅವಶ್ಯಕವಾಗಿದೆ.ಆದ್ದರಿಂದ ಯಾರೂ ಮನೆಯಿಂದ ಹೊರಗೆ ಬರದೆ ಮನೆಯಲ್ಲಿದ್ದು ಲಾಕ್‌ಡೌನ್ ಉಲ್ಲಂಘಿಸದೆ ರಂಜಾನ್ ಹಬ್ಬ ಆಚರಿಸುವಂತೆ ಪಿಎಸ್‌ಐ ಚೇತನ್ ತಿಳಿಸಿದರು.

ನಗರದ ಪೊಲೀಸ್ ಠಾಣೆ ಆವರಣದಲ್ಲಿ ಮಂಗಳವಾರ ಸಂಜೆ ನಡೆದ ಮುಸ್ಲಿಂ ಮುಖಂಡರೊಂದಿಗಿನ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ಇಂದು ನಾವೆಲ್ಲರು ಸಂದಿಗ್ಧ ಪರಸ್ಥಿತಿಯಲ್ಲಿದ್ದೆವೆ.ಕೊರೊನಾದಿಂದ ನಾವೆಲ್ಲರು ಪಾರಾಗಲು ಮನೆಯಲ್ಲಿರುವುದೆ ಅವಶ್ಯಕವಾಗಿದೆ.ಆದ್ದರಿಂದ ಈ ವರ್ಷದ ರಂಜಾನ್ ಹಬ್ಬವನ್ನು ಮನೆಯಲ್ಲಿದ್ದು ಆಚರಿಸಿ.ಅಲ್ಲದೆ ರಂಗಂಪೇಟೆಯಲ್ಲಿ ಯುವಕರು ಅನಾವಶ್ಯಕವಾಗಿ ಹೊರಗಡೆ ಬಂದು ಓಡಾಡುತ್ತಿದ್ದು ಹಿರಿಯರಾದವರು ಯುವಕರು ಹೊರಗೆ ಬರುವುದನ್ನು ತಡೆದು ಬುದ್ಧಿ ಹೇಳಿ.ಸದ್ಯ ತಾಲೂಕಿನಲ್ಲಿ ಯಾವುದೆ ಕೊರೊನಾ ಪಾಸಿಟಿವ್ ಪ್ರಕರಣಗಳಿಲ್ಲದೆ ನೆಮ್ಮದಿಯಿಂದ ಇದ್ದೇವೆ.ಮುಂದೆಯು ಬರುವುದು ಬೇಡ,ಅದಕ್ಕೆ ಎಲ್ಲರು ಮನೆಯಲ್ಲಿರಬೇಕಿದೆ.ಆದ್ದರಿಂದ ಅನಾವಶ್ಯಕವಾಗಿ ಯುವಕರು ಹೊರಗೆ ಬರದಂತೆ ತಿಳವಳಿಕೆ ಮೂಡಿಸುವಂತೆ ತಿಳಿಸಿದರು.

Contact Your\'s Advertisement; 9902492681

ಸಭೆಯಲ್ಲಿದ್ದ ಮುಖಂಡರು ಮಾತನಾಡಿ,ಪೊಲೀಸ್ ಇಲಾಖೆ ನಮಗಾಗಿ ತುಂಬಾ ಶ್ರಮಿಸುತ್ತಿದ್ದೀರಿ,ನಿಮಗೂ ನಾವು ಗೌರವ ಕೊಡುತ್ತೇವೆ.ಅಲ್ಲದೆ ನಗರದಲ್ಲಿನ ಯುವಕರು ಸುಖಾ ಸುಮ್ಮನೆ ಹೊರಗೆ ಬರುವವರಿಗೆ ನಾವೂ ಬುದ್ಧಿ ಹೇಳುವುದಾಗಿ ಹಾಗು ನಾವೆಲ್ಲರು ಈ ವರ್ಷ ಮನೆಗಳಲ್ಲಿಯೆ ಇದ್ದರು ರಂಜಾನ್ ಉಪವಾಸ ಮತ್ತು ಹಬ್ಬವನ್ನು ಆಚರಿಸುವುದಾಗಿ ಭರವಸೆ ನೀಡಿದರು.ಸಭೆಯ ವೇದಿಕೆ ಮೇಲೆ ಪಿಎಸ್‌ಐ ಚಂದ್ರಶೇಖರ ನಾರಾಯಣಪುರ, ಮುಖಂಡರಾದ ಮಹಿಬೂಬ ಮುಫ್ತಿ,ಖಾಜಾ ಖಲೀಲ್ ಅಹ್ಮದ ಅರಕೇರಿ,ಅಬ್ದುಲಗಫೂರ ನಗನೂರಿ,ಶೇಖ ಮಹಿಬೂಬ ಒಂಟಿ,ನಿಜ್ಜು ಉಸ್ತಾದ,ನಾಸೀರ್ ಕುಂಡಾಳೇ,ಅಬ್ದುಲ್ ಮಜೀದ್,ಮಹ್ಮದ್ ಮೌಲಾ ಸೌದಾಗರ್,ಖಾಲಿದ್ ಅಹ್ಮದ ತಾಳಿಕೋಟಿ,ಜಹೀರ್ ಖುರೇಶಿ,ದಾವೂದ್ ಪಠಾಣ್,ಅಬೀದ್ ಪಗಡಿ ಸೇರಿದಂತೆ ಅನೇಕರಿದ್ದರು.ಸಭೆಯನ್ನು ಪೇದೆ ದಯನಂದ್ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here