ಕಲಬುರಗಿ : ಇಡೀ ದೇಶ ಕರೊನಾ ಸೋಂಕಿನ ಸಂಕಷ್ಟದಲ್ಲಿ ಸಿಲುಕಿದ ಹಿನ್ನೆಲೆಯಲ್ಲಿ ‘ ಬಸವ ಜಯಂತಿ ‘ ಯನ್ನು ಪ್ರತಿಯೊಬ್ಬರೂ ತಮ್ಮ ತಮ್ಮ ಮನೆ ಯಲ್ಲಿಯೇ ಆಚರಿಸುವ ಮೂಲಕ ಕೊರೊನಾ ವಿರುದ್ಧ ಹೋರಾಡಬೇಕು ಎಂದು ಅಖಿಲ ಭಾರತೀಯ ವೀರಶೈವ ಮಹಾ ಸಭಾ ಸಂಸ್ಥೆಯ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆಯಾದ ಡಾ. ನಾಗವೇಣಿ ಎಸ್. ಪಾಟೀಲ ರಾವೂರ್ ಮನವಿ ಮಾಡಿದ್ದಾರೆ.
ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ ವಿಶ್ವಗುರು ಬಸವಣ್ಣನವರು ರಚಿಸಿದ ವಚನಗಳಲ್ಲಿ ನಮ್ಮೆಲ್ಲರ ಬದುಕಿಗೆ ಬೇಕಾದ ಶ್ರೇಷ್ಠ ತತ್ವಜ್ಞಾನವಿದೆ. ವ್ಯಕ್ತಿ ತತ್ವಕ್ಕೆ ಬದ್ದನಾಗಿರುವುದೇ ವ್ಯಕ್ತಿತ್ವ. ಅಂಥ ವ್ಯಕ್ತಿತ್ವ ನಿರ್ಮಾಣಕ್ಕೆ ಬೇಕಾದ ತತ್ವಜ್ಞಾನವಚನ ಸಾಹಿತ್ಯದಲ್ಲಿದೆ. ಹಾಗಾಗಿ, ಬಸವ ಜಯಂತಿಯನ್ನುಮನೆ ಯಲ್ಲಿಯೇ ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಬಸವಣ್ಣನವರ ವಿಚಾರಗಳು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಜಗತ್ತಿಗೆ ಮುಟ್ಟಿಸುವ ಕಾರ್ಯ ಮಾಡೋಣ. ಹಾಗೆಯೇ ಜಗತ್ತಿನಿಂದ ಕೊರೊನಾ
ವೈರಸ್‌ನ್ನು ಹೋಗಲಿ ಎಂದು ಪ್ರಾರ್ಥಿಸೋಣ ಎಂದುು ಅವರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.