ಚಿತ್ತಾಪುರ: ತಾಲೂಕಿನ ದಂಡೋತಿ ವಲಯದ ಅಂಗನವಾಡಿ ಕೇಂದ್ರ 3ರ ಸ್ತ್ರೀಶಕ್ತಿ ಸಂಘಗಳಾದ ಭಾಗ್ಯವಂತಿ ಸ್ತ್ರೀಶಕ್ತಿ ಸಂಘ, ಹಾಗೂ ವೈಭವಲಕ್ಷ್ಮಿ ಸ್ತ್ರೀಶಕ್ತಿ ಸಂಘಗಳು ಸೇರಿ ಕೊರೊನ್ ವೈರಸ್(ಕೋವಿಡ್ -19) ಮಹಾಮಾರಿ ರೋಗವನ್ನು ತಡೆಗಟ್ಟುವ ಹಾಗೂ ಮುಂಜಾಗ್ರತಾ ಕ್ರಮವಾಗಿ ಈ ಸಂಘಗಳು ಮಾಸ್ಕ್ ಗಳನ್ನು ತಯಾರಿಸಲಾಗುತ್ತಿದೆ, ಲಾಕ್ ಡೌನ್ ಸಮಯದಲ್ಲಿ ಈ ಮಾಸ್ಕ್ ಗಳನ್ನು ತಯಾರಿಸಲು ನಮಗೆ ಉತ್ತೇಜನ ನೀಡಿದ ಹೆಗ್ಗಳಿಕೆ ಸಿಡಿಪಿಓ ರಾಜಕುಮಾರ್ ರಾಠೋಡ್ ಅವರಿಗೆ ಸಲ್ಲುತ್ತದೆ ಎಂದು ಸಂಘದ ಕಾರ್ಯದರ್ಶಿಯಾದ ಅಕ್ಕಮಹಾದೇವಿ ಮತ್ತು ಸದಸ್ಯರು ತಿಳಿಸಿದರು.
ಮಾಸ್ಕ್ ಗಳ ಕೊರತೆ ಉಂಟಾಗಿರುವುದನ್ನು ಹಾಗೂ ಮಾಸ್ಕ್ ಗಳ ದುಬಾರಿ ಬೆಲೆಯನ್ನು ಕಂಡು ಈಗ ನಮ್ಮ ಸ್ತ್ರೀಶಕ್ತಿ ಸಂಘದ ಮಹಿಳೆಯರು ತುಂಬಾ ಆಸಕ್ತಿಯಿಂದ ಮಾಸ್ಕ್ ತಯಾರಿಸುತ್ತಿದ್ದಾರೆ, ಈಗಾಗಲೇ 500 ರಿಂದ 1000 ವರೆಗೆ ಮಾಸ್ಕ್ ಗಳನ್ನು ತಯಾರಿಸಿದ್ದು ಈ ಮಾಸ್ಕ್ ಗಳನ್ನು ಬೇಡಿಕೆಗೆ ಅನುಗುಣವಾಗಿ ಪೂರೈಸಲಾಗುತ್ತಿದೆ. ಆದರೆ ಸ್ತ್ರೀಶಕ್ತಿ ಸಂಘಕ್ಕೆ ಉತ್ತೇಜನ ನೀಡಿದ ಸಿಡಿಪಿಓ ರಾಜಕುಮಾರ್ ರಾಠೋಡ್ ಅವರನ್ನು ಅಮಾನತು ಮಾಡಿರುವ ವಿಷಯ ಬೇಸರವನ್ನುಂಟು ಮಾಡಿದೆ, ಮತ್ತೆ ರಾಜಕುಮಾರ್ ರಾಠೋಡ್ ಸಿಡಿಪಿಓ ಆಗಿ ಬರಲಿ ಎಂಬುದು ನಮ್ಮೆಲ್ಲರ ಆಸೆಯಾಗಿದೆ.
ವೈಭವಲಕ್ಷ್ಮಿ ಸ್ತ್ರೀಶಕ್ತಿ ಸಂಘದ ಅಧ್ಯಕ್ಷ ಲಕ್ಷ್ಮಿ, ಕಾರ್ಯದರ್ಶಿ ಜಗದೇವಿ, ಭಾಗ್ಯವಂತಿ ಸ್ತ್ರೀಶಕ್ತಿ ಸಂಘದ ಅಧ್ಯಕ್ಷ ನಾಗಮ್ಮ, ಕಾರ್ಯದರ್ಶಿ ಸುಶೀಲಾಬಾಯಿ, ವಿದ್ಯಾನಿಧಿ ಅರ್ ಕವಡೆ. ಸೇರಿದಂತೆ ಇತರರಿದ್ದರು.