ಕೊರೊನಾ ಪರಿಹಾರ ನಿಧಿಗೆ ದೇಣಿಗೆ

0
34

ವಾಡಿ: ದೇಶದಲ್ಲಿ ಸಾವಿನ ಅಟ್ಟಹಾಸ ವಿಜೃಂಬಿಸುತ್ತಿರುವ ಕೊರೊನಾ ವೈರಸ್ ಎಂಬ ಸಾಂಕ್ರಾಮಿಕ ರೋಗದ ವಿರುದ್ಧ ಸರಕಾರ ಹೋರಾಟ ನಡೆಸುತ್ತಿದೆ. ಲಾಕ್‍ಡೌನ್ ಘೋಷಣೆಯಿಂದ ಬಡವರ ಬದುಕು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಹಸಿದವರಿಗೆ ನೆರವಾಗಲು ಕೇಂದ್ರ ಸರಕಾರ ಪರಿಹಾರ ನಿಧಿ ಸಂಗ್ರಹಕ್ಕೆ ಮುಂದಾಗಿದೆ.

ವಾಡಿ ಪಟ್ಟಣದ ಮಾಹಾತ್ಮಾ ಗಾಂಧಿ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷೆ ನಾಜ್ ಪರ್ವೀನ್ ಹಾಗೂ ಕಾರ್ಯದರ್ಶಿ ಶೇಖ್ ಅನ್ವರ್ ದಂಪತಿಗಳು ಸೋಮವಾರ ಇಲ್ಲಿನ ಎಸ್‍ಬಿಎಚ್ ಶಾಖೆಯ ವ್ಯವಸ್ಥಾಪಕ ಸುರೇಶ ಕುಮಾರ ಮೂಲಕ ಪ್ರಧಾನಮಂತ್ರಿ ಕೊರೊನಾ ಪರಿಹಾರ ನಿಧಿಗೆ ರೂ.20,000 ಚೆಕ್ ಜಮೆ ಮಾಡುವ ಮೂಲಕ ಸಹಾಯ ಹಸ್ತ ಚಾಚಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here