ಸೇಡಂ: ರೈತರ ಸಾಲ ಮನ್ನಾ ಮಾಡಲು ಮೋದಿ ಸರ್ಕಾರದ ಬಳಿ ಹಣವಿಲ್ಲ. ಆದರೆ ಕೋಟ್ಯಾಧೀಶ ಉದ್ಯಮ ಹೆಸರಲ್ಲಿ ಕೋಟಿ ಕೋಟಿ ಹಣ ಲೂಟಿಕೋರರ ಸಾಲ ಮನ್ನಾ ಮಾಡಲು ಹೊರಟಿರುವುದು ಖಂಡನೀಯ, ದೇಶದ ರೈತರು ಸಾಲ ತೀರಿಸದೆ ಆತ್ಮಹತ್ಯೆ ಮಾಡಿಕೊಳ್ಳತ್ತಿರುವ ಘಟನೆಗಳು ನಡೆಯುತ್ತಿದರು, ನೆರವಿಗೆ ಬಾರದ ಬಿಬಿಜೆಪಿ ಸರಗಕಾರದ ನಡೆ ಖಂಡನೀಯ ಎಂದು ರಾಜ್ಯ ದಲಿತ ವೇದಿಕೆ ಕಲ್ಯಾಣ ಕರ್ನಾಟಕ ವಿಭಾಗೀಯ ಅಧ್ಯಕ್ಷರಾದ ವಿಲಾಸ ಗೌತಂ ನಿಡಗುಂದಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲೂಟಿಕೋರರು ದೇಶದ ಹಣವನ್ನು ದೋಚಿಕೊಂಡಿ ವಿದೇಶದಲ್ಲಿ ತಲೆಮರೆಸಿಕೊಂಡು ಐಷಾರಾಮಿ ಜೀವನ ಸಾಗುತ್ತಿದ್ದು, ಇಂತಹ ಸಮಯದಲ್ಲಿ ಒಟ್ಟು 50 ಉದ್ಯಮಿಗಳ 68 ಸಾವಿರ ಕೋಟಿ ಸಾಲ ಮನ್ನಾ ಮಾಡಿ, ಸರಕಾರದ ಹಲವು ಅನುಮಾನ ವ್ಯಕ್ತವಾಗುತಿದೆ ಎಂದರು.
ಲಂಡನ್ ನಲ್ಲಿ ತಲೆಮರೆಸಿಕೊಂಡಿರುವ ವಿಜಯ್ ಮಲ್ಯ ಅವರ ಕಿಂಗ್ ಫಿಶರ್ ಏರ್ಲೈನ್ಸ್ ನ 1943 ಕೋಟಿ ರೂಪಾಯಿ ಸಾಲ ಮನ್ನಾ ಆಗಿದೆ , ಇಂತಹ ಒಟ್ಟು 50 ಉದ್ಯಮಿಗಳಿಗೆ 68,607 ಕೋಟಿ ರೂಪಾಯಿ ಸುಸ್ತಿ ಸಾಲವನ್ನು ಮನ್ನಾ (write off ) ಭಾರತೀಯ ರಿಸರ್ವ್ ಬ್ಯಾಂಕ್ ಮಾಡಿದ್ದು, ಇದನ್ನು ಗುಂಪು ಸಮರ್ಥಿಸಿಕೊಳ್ಳುವ ಕೇಲವು ರೈತರ ಸಾಲ ಏಕೆ? ಮಾಡಬೇಕೆಂಬ ಮುಟ್ಟಾಳತನ ಪ್ರದರ್ಶಿಸುತ್ತಿದ್ದಾರೆ.
ಸಾಲಮನ್ನಾ ಮಾಡಿದು ಒಳ್ಳೆಯದೇ ಆಯಿತು ಅಂತ ಹೇಳುವವರು, ಈಗಲಾದರೂ ರೈತರ ಸಾಲ ಮನ್ನಾ ಬಗ್ಗೆ ಸಂಸದರು, ಶಾಸಕರು ಜನ ಪ್ರತಿನಿಧಿಗಳು ಧ್ವನಿ ಎತ್ತಿ ರೈತರ ಸಾಲ ಮನ್ನಾ ಮಾಡಿಸಿ ಎಂದು ಸವಾಲ ಹಾಕಿದಾರೆ.