ಮದಗುಣಕಿ: ಅಗ್ನಿ ಅವಘಡ ಶಾಸಕ ಗುತ್ತೇದಾರರಿಂದ ಪರಿಹಾರ

0
211

ಆಳಂದ: ತಾಲೂಕಿನ ಮಾದನಹಿಪ್ಪರ್ಗಾ ಹೋಬಳಿಯ ಮದಗುಣಕಿ ಗ್ರಾಮದಲ್ಲಿ ಇತ್ತೀಚಿಗೆ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿ ಸುಟ್ಟು ಕರಕಲಾದ ಮನೆಗೆ ಶಾಸಕ ಸುಭಾಷ್ ಆರ್ ಗುತ್ತೇದಾರ ಭೇಟಿ ನೀಡಿ ಸಂತ್ರಸ್ತರಿಗೆ ಪರಿಹಾರ ನೀಡಿದರು.
ಮದಗುಣಕಿಯ ಹಣಮಂತ ಸಣಮನಿ ಎಂಬುವವರಿಗೆ ಸೇರಿದ ಮನೆ ಆಕಸ್ಮಿಕ ಅಗ್ನಿ ಅವಘಡಕ್ಕೆ ಬೆಂಕಿಗೆ ಆಹುತಿಯಾಗಿತ್ತು. ಮನೆಯಲ್ಲಿದ್ದ ದಿನಸಿ ಪದಾರ್ಥ, ಬಟ್ಟೆ, ಬೆಳೆದ ಬೆಳೆ ಸೇರಿ ಹಲವು ವಸ್ತುಗಳು ಸಂಪೂರ್ಣ ಸುಟ್ಟು ಭಸ್ಮವಾಗಿದ್ದವು ಇದರಿಂದ ಕುಟುಂಬದವರು ತೀವ್ರ ತೊಂದರೆ ಅನುಭವಿಸುತ್ತಿದ್ದರು.

ವಿಷಯ ತಿಳಿದು ಗ್ರಾಮಕ್ಕೆ ಭೇಟಿ ನೀಡಿದ ಶಾಸಕರು ಆಹಾರ ಪದಾರ್ಥಗಳು ಸೇರಿದಂತೆ ಅನೇಕ ವಸ್ತುಗಳನ್ನು ನೀಡಿ ವೈಯಕ್ತಿಕವಾಗಿ 5 ಸಾವಿರ ರೂ. ಪರಿಹಾರ ನೀಡಿದರು. ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಗುರುಶಾಂತ ಪಾಟೀಲ ನಿಂಬಾಳ ಹೊಸ ಪತ್ರಾಗಳನ್ನು ಖರೀದಿಸಲು 10 ಸಾವಿರ ನೀಡಿದರು. ಸಧ್ಯ ಸಂತ್ರಸ್ತ ಕುಟುಂಬದವರಲ್ಲಿ ಸಂತಸ ಮನೆ ಮಾಡಿದ್ದು ಜನಪ್ರತಿನಿಧಿಗಳ ಸಹಕಾರದಿಂದ ಶೀಘ್ರದಲ್ಲಿ ವಾಸಿಸಲು ಸೂರು ಸಿಗುವಂತಾಗಿದೆ ಎಂದು ಹಣಮಂತ ಸಣಮನಿ ತಿಳಿಸಿದ್ದಾರೆ.

Contact Your\'s Advertisement; 9902492681

ಶಾಸಕ ಸುಭಾಷ್ ಆರ್ ಗುತ್ತೇದಾರ ಮಾತನಾಡಿ, ರಾಜ್ಯ ವಿಪತ್ತು ಪರಿಹಾರ ನಿಧಿಯ ಅಡಿಯಲ್ಲಿ ಸಂತ್ರಸ್ತರಿಗೆ ಸರ್ಕಾರದ ವತಿಯಿಂದ ಇನ್ನೂ ಹೆಚ್ಚಿನ ಸಹಾಯ ಮಾಡಲು ಸರ್ಕಾರಕ್ಕೆ ಕೋರುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಗುರುಶಾಂತ ಪಾಟೀಲ ನಿಂಬಾಳ, ಮುಖಂಡರಾದ ಶರಣಬಸಪ್ಪ ಪಾಟೀಲ, ಮಲ್ಲಣ್ಣ ನಾಗೂರೆ, ಮಲ್ಲಿನಾಥ ಪರೇಣಿ, ಶಿವಲಿಂಗಪ್ಪ ಜಮಾದಾರ, ಬಸವರಾಜ ಶಾಸ್ತ್ರೀ, ಪಿಎಸ್‍ಐ ಇಂದುಮತಿ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here