ಸುರಪುರ: ತಾಲೂಕಿನ ಜಾಲಿಬೆಂಚಿ ಗ್ರಾಮದ ರೈತನಾದ ಸಿದ್ದಪ್ಪ ಮೈಲಾರೆಪ್ಪ ಭಂಡಾರಿ ಎಂಬುವವರ ಎರಡು ಎತ್ತುಗಳು ಒಂದೇ ವಾರದಲ್ಲಿ ಸಾವನ್ನಪ್ಪಿದ್ದು ರೈತ ಸಿದ್ದಪ್ಪ ಈಗ ಎತ್ತುಗಳಿಲ್ಲದೆ ತೀವ್ರ ದುಃಖು ಪಡುವಂತಾಗಿದೆ.
ಕಳೆದ ಎಪ್ರಿಲ್ 20ನೇ ತಾರೀಖಿನಂದು ಒಂದು ಎತ್ತು ಇದ್ದಕ್ಕಿದ್ದಂತೆ ಜ್ವರದಿಂದ ನರಳಿ ಸಾವನ್ನಪ್ಪಿದ್ದು ಪಶು ಆಸ್ಪತ್ರೆಯ ವೈದ್ಯರು ಭೇಟಿ ನೀಡಿ ಚಿಕಿತ್ಸೆ ನೀಡಿದರು ಫಲಿಸಿರಲಿಲ್ಲ. ಈಗ ಮತ್ತೊಂದು ಎತ್ತುಕೂಡ ಜ್ವರ ಬಂದು 29ನೇ ತಾರೀಖು ಸಾವನ್ನಪ್ಪಿದ್ದು ಎತ್ತಿಗೆ ಬಂದಿರುವ ಜ್ವರ ಯಾವುದು ಎಂಬುದು ಪಶು ಆಸ್ಪತ್ರೆಯ ವೈದ್ಯರಿಗೆ ಸವಾಲಾಗಿದೆ.ಎತ್ತಿಗೆ ಜ್ವರ ಬಂದಿದ್ದಕ್ಕೆ ಚಿಕಿತ್ಸೆ ನೀಡಿದರು ಫಲಕಾರಿಯಾಗದಿರುವುದು ರೈತರಲ್ಲಿ ಮತ್ತಿಷ್ಟು ದಿಗಿಲು ಹುಟ್ಟಿಸಿದೆ.ನಮ್ಮ ಎತ್ತುಗಳಿಗೂ ಇಂತಹ ಜ್ವರ ಬಂದರೆ ಗತಿ ಏನು ಎಂದು ರೈತರು ಚಿಂತಿಸುವಂತಾಗಿದೆ.
ಇದ್ದ ಎರಡು ಎತ್ತುಗಳನ್ನು ಕಳೆದುಕೊಂಡ ರೈತ ಸಿದ್ದಪ್ಪ ಭಂಡಾರಿ ಈಗ ತುಂಬಾ ದಃಖದಲ್ಲಿ ಮುಳುಗಿದ್ದಾರೆ.ಈಗಾಗಲೆ ಮಳೆ ಆರಂಭವಾಗಿದ್ದು ಹೊಲಗಳನ್ನು ಹದಗೊಳಿಸಲು ರೈತ ಚಟುವಟಿಕೆ ಆರಂಭಗೊಳ್ಳುವ ಸಂದರ್ಭದಲ್ಲಿ ಎತ್ತುಗಳು ಇಲ್ಲವಾಗಿದ್ದು ಮತ್ತಿಷ್ಟು ಚಿಂತೆಗೀಡಾಗಿದ್ದು ಮುಂದೆ ಏನು ಮಾಡುವುದೆಂದು ತೋಚದಂತಾಗಿದೆ.
ಆದ್ದರಿಂದ ಸರಕಾರ ಮತ್ತು ಶಾಸಕ ನರಸಿಂಹ ನಾಯಕರು ಈ ರೈತನ ನೆರವಿಗೆ ಬರಬೇಕೆಂದು ಗ್ರಾಮದ ಅನೇಕ ಜನ ರೈತರು ಬಡ ರೈತನ ಪರವಾಗಿ ಶಾಸಕರಲ್ಲಿ ವಿನಂತಿಸುತ್ತಿದ್ದಾರೆ.ಈಗ ಎತ್ತುಗಳೆ ಅವರ ಕುಟುಂಬಕ್ಕಾದಾರಾ.
ಆದರೆ ಇದ್ದೆರಡು ಎತ್ತುಗಳು ಸಾವನ್ನಪ್ಪಿದ್ದರಿಂದ ಇಡೀ ಕುಟುಂಬ ದುಖದಲ್ಲಿ ಮುಳುಗಿದೆ,ತಾಲೂಕು ಆಡಳಿತ,ಪಶು ಸಂಗೋಪನಾ ಇಲಾಖೆ ಮತ್ತು ಶಾಸಕರು ಇವರ ನೆರವಿಗೆ ಬರುವರೆ ಕಾದು ನೋಡಬೇಕಿದೆ.