ಸುರಪುರ: ತಾಲೂಕಿನ ಕೆ.ತಳ್ಳಳ್ಳಿ ಗ್ರಾಮದಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಗ್ರಾಮದ ಗರ್ಭೀಣಿ ಮಹಿಳೆಯರು,ಬಾಣಂತಿಯರು ಮತ್ತು ಮಕ್ಕಳಿಗೆ ಪೌಷ್ಠಿಕಾಂಶವುಳ್ಳ ಆಹಾರ ಧಾನ್ಯಗಳನ್ನು ವಿತರಿಸಲಾಯಿತು.ಗ್ರಾಮ ಪಂಚಾಯತಿ ಸದಸ್ಯಳಾದ ಬಸ್ಸಮ್ಮ ಭೀಮಶೆನ್ ದೊರಿಯವರು ಆಹಾರ ಧಾನ್ಯಗಳನ್ನು ವಿತರಿಸುವ ಮೂಲಕ ಕಾರ್ಯಕ್ರಮ್ಕಕೆ ಚಾಲನೆ ನೀಡಿದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಅಂಗನವಾಡಿ ಕಾರ್ಯಕರ್ತೆ ಮಲ್ಕಮ್ಮ ಮಲ್ಲಿಕಾರ್ಜುನ ಚಲುವಾದಿ ಮಾತನಾಡಿ,ಸರಕಾರ ರಾಜ್ಯದಲ್ಲಿನ ಯಾವುದೆ ಮಹಿಳೆಯರು ಅಪೌಷ್ಠಿಕತೆಯಿಂದ ನರಳಬಾರದೆಂಬ ಉದ್ದೇಶದಿಂದ ಈ ಪೌಷ್ಠಿಕ ಆಹಾರ ಪದಾರ್ಥಗಳ ವಿತರಿಸುವ ಯೋಜನೆ ಜಾರಿಗೊಳಿಸಿದ್ದು,ಇವುಗಳನ್ನು ಪಡೆದುಕೊಂಡು ಸರಿಯಾದ ಪ್ರಮಾಣದಲ್ಲಿ ಉಪಯೋಗಿಸಿದಲ್ಲಿ ಅಪೌಷ್ಠಿಕತೆ ಹೋಗಲಾಡಿಸಲು ಸಾಧ್ಯವಿದೆ,ಆದ್ದರಿಂದ ಎಲ್ಲರು ಇವುಗಳನ್ನು ಸದುಪಯೋಗ ಮಾಡಿಕೊಳ್ಳುವಂತೆ ತಿಳಿಸಿದರು.
ಅಲ್ಲದೆ ಇಂದು ಕೊರೊನಾ ಎಂಬ ಮಹಾಮಾರಿ ವೈರಸ್ ಜಗತ್ತನ್ನು ಕಾಡುತ್ತಿರುವುದರಿಂದ ಮಹಿಳೆಯರು ಮತ್ತು ಮಕ್ಕಳು ಮನೆಯಿಂದ ಹೊರಗೆ ಬರದೆ ಮನೆಯಲ್ಲಿದ್ದು ಆರೋಗ್ಯ ಕಾಪಾಡಿಕೊಳ್ಳುವಂತೆ ಹಾಗು ಹೊರಗಡೆ ಬಂದಲ್ಲಿ ಮುಖಕ್ಕೆ ಮಾಸ್ಕ್ ಅಥವಾ ಕರವಸ್ತ್ರವನ್ನು ಕಟ್ಟಿಕೊಂಡು ಬರುವಂತೆ ತಿಳಿಸಿದರು.ಅಲ್ಲದೆ ಹೊರಗಿನಿಂದ ಹೋದ ಕೂಡಲೆ ಸಾಬೂನಿನಿಂದ ಕೈಗಳನ್ನು ಸ್ವಚ್ಛ ತೊಳೆದುಕೊಳ್ಳುವುದು ಅವಶ್ಯವಾಗಿದೆ ಎಂದರು.
ನಂತರ 104 ಜನ ಮಕ್ಕಳಿಗೆ,31 ಜನ ಗರ್ಭೀಣಿ ಮತ್ತು ಬಾಣಂತಿಯರಿಗೆ ಕಿಶೋರಿ ಪೌಷ್ಟೀಕತೆಯ ಕಿಟ್‍ಗಳನ್ನು ವಿತರಿಸಿದರು.ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆ ಈರಮ್ಮ ಶರಣಗೌಡ,ಅಂಗನವಾಡಿ ಸಹಾಯಕಿ ಹಣಮಂತಿ ಅಲ್ಗೂರ ಹಾಗು ಗ್ರಾಮದ ಪ್ರಮುಖರು ಮತ್ತು ಮಹಿಳೆಯರು ಹಾಗು ಮಕ್ಕಳಿದ್ದರು.