ಸುರಪುರ: ದೇಶಾದ್ಯಂತ ಘೋಷಣೆಯಾಗಿರುವ ಲಾಕ್‍ಡೌನ್ ನಿಯಮ ಉಲ್ಲಂಘಿಸಿ ಅನಾವಶ್ಯಕವಾಗಿ ಹೊರಗೆ ಬಂದವರ ಬೈಕ್‍ಗಳ ಸೀಜ್ ಮಾಡಲಾಗಿದ್ದ ಬೈಕ್‍ಗಳನ್ನು ಬಿಡುಗಡೆಗೊಳಿಸಲಾಯಿತು.
ನಗರದ ಪೊಲೀಸ್ ಠಾಣೆ ಆವರಣದಲ್ಲಿ ನಿಲ್ಲಿಸಲಾಗಿದ್ದ ತಮ್ಮ ಬೈಕ್‍ಗಳನ್ನು ಬಿಡಿಸಿಕೊಂಡು ಹೋಗಲು ಠಾಣೆಯ ಮುಂದೆ ಜನ ಜಂಗುಳಿಯೆ ಸೇರಿತ್ತು.ಸುಮಾರು 230ಕ್ಕೂ ಹೆಚ್ಚು ಬೈಕ್‍ಗಳನ್ನು ಸೀಜ್ ಮಾಡಲಾಗಿದ್ದರಿಂದ ಎಲ್ಲಾ ಬೈಕ್‍ಗಳ ಮಾಲೀಕರು ಇಂದು ಮುಗಿಬಿದ್ದಿದ್ದು ಕಂಡುಬಂತು.
ಬೆಳಿಗ್ಗೆಯಿಂದ ಪ್ರತಿಯೊಂದು ಬೈಕ್‍ಗಳ ದಾಖಲಾತಿಗಳನ್ನು ಪರಿಶೀಲಿಸಿ ಬೈಕ್‍ಗಳನ್ನು ಮಾಲೀಕರಿಗೆ ನೀಡಿದರು.ದಾಖಲಾತಿಗಳು ಸರಿಯಾಗಿಲ್ಲದ ಬೈಕ್‍ಗಳಿಗೆ ನಿಯಮದಂತೆ ದಂಡ ವಿಧಿಸಲಾಯಿತು.ಒಂದೊಂದು ಬೈಕ್‍ಗೆ ಎರಡು ಸಾವಿರ,ಎರಡುವರೆ ಸಾವಿರ,ಮೂರು ಸಾವಿರ ಹೀಗೆ ಸಂಚಾರಿ ನಿಯಮದ ರೀತಿಯಲ್ಲಿ ದಂಡ ವಿಧಿಸಿದರು.ದಂಡ ಕಟ್ಟಿ ಬೈಕ್‍ಗಳನ್ನು ಬಿಡಿಸಿಕೊಂಡು ಬಂದ ಬೈಕ್‍ಗಳ ಮಾಲೀಕರು ನಿಟ್ಟುಸಿರು ಬಿಟ್ಟರು.
ಆರಕ್ಷಕರ ನಿರೀಕ್ಷಕರಾದ ಎಸ್.ಎಮ್.ಪಾಟೀಲ್ ಅವರ ನೇತೃತ್ವದಲ್ಲಿ ಪಿಎಸ್‍ಐ ಚೇತನ್ ಬಿದರಿ,ಹೆಚ್‍ಸಿ ಶಿವಪ್ಪ ಮಾಲಿಪಾಟೀಲ್,ಬಸವರಾಜ ಪಿಸಿಗಳಾದ ಮಹಾಂತೇಶ ಬಿರಾದಾರ್,ಮಾನಯ್ಯ,ನಿಂಗಣ್ಣ,ಮಹಿಳಾ ಪೇದೆಗಳಾದ ಪರಿಮಳ ಕೆ,ಭಾಗ್ಯಶ್ರೀ ಎಸ್ ಇವರುಗಳ ತಂಡ ಬೈಕ್‍ಗಳ ದಾಖಲೆ ಪರಿಶೀಲಿಸಿ ಬಿಡುಗಡೆಗೊಳಿಸಿದರು.