ಕೊರೊನಾ ಎಂಬ ಮಹಾಮಾರಿ ಹರಡಿದಾಗಿನಿಂದಲೂ ಜಗತ್ತಿನಾದ್ಯಂತ ಆರ್ಥಿಕ ಚಟುವಟಿಕೆಗಳು ಸಂಪೂರ್ಣ ಸ್ತಬ್ದಗೊಂಡಿವೆ. ಇನ್ನೂ ಕೆಲವು ಕಡೆ ಭಾಗಶಃ ನಡೆಯುತ್ತಿರುವುದರಿಂದ ತನ್ನ ಲಯ ಕಳೆದುಕೊಂಡಿದ್ದ ನಿಸರ್ಗ ಮರಳಿ ಸಹಜ ಸ್ಥಿತಿಯತ್ತ ಮರುಳುತ್ತಿರುವುದನ್ನು ಕಂಡು ಸಂತೋಷ ಇಮ್ಮಡಿಯಾಗುತ್ತಿದೆ. ಕಲುಷಿತ ಗಾಳಿ, ಕಲುಷಿತ ನೀರು, ಕಲುಷಿತ ವಾತಾವರಣದಲ್ಲಿ ಬದುಕುತ್ತಿದ್ದ ಮನುಷ್ಯನಿಗೆ ಇಂದು ಮತ್ತೆ ಸ್ವಚ್ಛ ಗಾಳಿ, ಸ್ವಚ್ಛ ನೀರು, ಸ್ವಚ್ಛ ವಾತಾವರಣ ಲಭಿಸುವಂತಾಗಿದೆ.
ಕಳೆದ ಮೂವತ್ತು ವರ್ಷಗಳಿಂದ ಮರೆಯಾಗಿದ್ದ ಹಿಮಾಲಯ ನೂರು ಮೈಲು ದೂರದಲ್ಲಿರುವ ಜಲಂಧರ್‌ನ ಜನತೆ ಮತ್ತೊಮ್ಮೆ ಕಣ್ಣುಗಳನ್ನು ತುಂಬಿಕೊಳ್ಳುವಂತಾಗಿದೆ ಎಂದು ಅಲ್ಲಿನ ಜನರು ಖುಷಿಯಿಂದ ಹೇಳುತ್ತಿದ್ದಾರೆ. ಲಾಕ್‌ಡೌನ್‌ನಿಂದಾಗಿ ಆಕಾಶ ಶುಭ್ರವಾಗಿ ೨೫೦ ಕಿ.ಮೀ. ಎತ್ತರದಲ್ಲಿರುವ ಬಾಹ್ಯಾಕಾಶ ನಿಲ್ದಾಣ (Sಠಿಚಿಛಿe sಣಚಿಣioಟಿ) ಕಾಣುವಂತಾಗಿದೆ. ಇದೆಲ್ಲವನ್ನು ಗಮನಿಸಿದರೆ ನಮ್ಮ ಪರಿಸರ ಎಷ್ಟೊಂದು ಶುಚಿಗೊಂಡಿರಬೇಕು ನೀವೇ ಊಹಿಸಿ! ನಮ್ಮ ಜೀವಿತಾವಧಿಯಲ್ಲಿಯೇ ಒಂದು ಕೊಳಚೆ ನಾಲಿಯಾಗಿ ಹಾಗೆ ಉಳಿಯುತ್ತದೆ ಎಂದುಕೊಂಡಿದ್ದ ನಮಗೆ ಅದು ತಿಳಿಯಾಗಿದೆ ಎಂಬುದನ್ನು ಅರಿತು ನಮ್ಮ ಹರ್ಷಕ್ಕೆ ಪಾರವೇ ಇಲ್ಲದಂತಾಗಿದೆ.
ಕಾಂಕ್ರಿಟ್ ಕಾಡಿನಲ್ಲಿ ವಾಸಿಸುತ್ತಿರುವ ನಮಗೆ ನಮ್ಮ ಸುತ್ತಲೂ ಚಿಲಿಪಿಲಿಗುಟ್ಟುತ್ತಿದ್ದ ಪಕ್ಷಿಗಳು ನಮಗರಿವಿಲ್ಲದೆದಂತೆಯೇ ಮರೆಯಾಗಿದ್ದವು. ಈ ಲಾಕ್‌ಡೌನ್‌ನ ಪರಿಣಾಮವಾಗಿ ಕಾಂಕ್ರಿಟ್ ಕಾಡಿನಲ್ಲಿ ಮತ್ತೊಮ್ಮೆ ಗುಬ್ಬಚ್ಚಿ, ಕಾಗೆ, ಗೊರವಂಕ, ಬೆಳವ, ಕೆಂಭೂತ, ಕೋಗಿಲೆಗಳ ಕಲವರವ ನಮ್ಮ ಕಿವಿಗಳಿಗೆ ಮತ್ತೊಮ್ಮೆ ಇಂಪಾಗಿ ಕೇಳಿಸುತ್ತಿದೆ.
ಕೊರೊನಾ ಮತ್ತು ಸಮರ ನೀತಿ: ಕೊರೊನಾ ಎಂಬ ವೈರಾಣುವಿನಿಂದಾಗಿ ಇಡೀ ಜಗತ್ತು ತಲ್ಲಣಗೊಂಡಿದೆ. ಈ ಃoಥಿಟogiಛಿಚಿಟ ತಿಚಿಡಿ ಸಮರದ ದಿಕ್ಕನ್ನೇ ಬದಲಿಸಿದೆ. ಸಾಂಪ್ರದಾಯಿಕ ಯುದ್ಧ ನೀತಿಗಳೇ ಬುಡಮೇಲಾಗುವಂತೆ ಕಂಡು ಬರುತ್ತಿವೆ. Sಣಚಿಡಿ, S-೪೦೦, ೫ಣh ಜಿ ಎಫ್-೩೨, Su-೫೭, ಃಡಿಚಿmos ಕ್ಷಿಪಣಿ, ೭ ಮ್ಯಾಕ್, ಹೈಡ್ರೋಜನ್, ನ್ಯೂಕ್ಲಿಯರ್ ಬಾಂಬ್‌ಗಳು ಅರ್ಥ ಕಳೆದುಕೊಂಡಿವೆ.
ಸೂಪರ್ ಪವರ್ ರಾಷ್ಟ್ರ ಮತ್ತು ಅದರ ಮಿತ್ರ ರಾಷ್ಟ್ರಗಳು ಜಗತ್ತು ತಮ್ಮ ಅಣತಿಯಂತೆ ನಡೆಯಬೇಕೆಂದು ಬಯಸುತ್ತಿದ್ದವು. ಅಂತಹ ರಾಷ್ಟ್ರಗಳಲ್ಲಿ ಇಂದು ಅತೀ ಹೆಚ್ಚು ನಷ್ಟ, ಸಾವು-ನೋವು ಉಂಟಾಗಿವೆ. ಇಂಥ ಬಲಾಢ್ಯರ ಗುದ್ದಾಟದಲ್ಲಿ ಭಾರತೀಯರಾದ ನಾವು ಸಹ ಅದರ ಪಾಲು ಅನುಭವಿಸುವುಂತಾಗಿದೆ. ಅಮೆರಿಕ ಇಂದು ಗಾಯಗೊಂಡ ಹುಲಿಯಂತಾಗಿದೆ. ತನ್ನ ಸೈನ್ಯಕ್ಕೆ ಎಲೆಫೆಂಟ್ ವಾಕ್ ಮಾಡಲು ನಿರ್ದೇಶಿಸಿದೆ. ಒಂದು ವೇಳೆ ಈ ಎಲ್ಲ ರಾಷ್ಟ್ರಗಳು ಪ್ರತಿಕಾರಕ್ಕೆ ಮುಂದಾದರೆ ಮೂರನೇ ಮಹಾಯುದ್ಧಕ್ಕೆ ನಾಂದಿಯಾಗುವುದರಲ್ಲಿ ಯಾವುದೇ ಸಂದೇಶಹವಿಲ್ಲ.
೮೪ ಲಕ್ಷ ಜೀವರಾಶಿಗಳಲ್ಲಿ ಮನುಷ್ಯ ಕೂಡ ನಿಸರ್ಗದ ಕೂಸು. ಆದರೆ ಮನುಷ್ಯನೊಬ್ಬನೇ ತನ್ನ ಸ್ವಾರ್ಥಕ್ಕಾಗಿ ನಿಸರ್ಗವನ್ನು ನಿಯಂತ್ರಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾನೆ. ಇಡೀ ಭೂ ಮಂಡಲವನ್ನೇ ತನ್ನ ಪಾದದ ಅಡಿಯಲ್ಲಿ ಇರಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದಾನೆ. ಹೀಗೆ ಮುನುಷ್ಯ ಮುಂದಾದಾಗಲೆಲ್ಲ ನಿಸರ್ಗ ಅದಕ್ಕೆ ಪ್ರತಿರೋಧಿಸುತ್ತಲೇ ಬಂದಿದೆ. ಅಂತೆಯೇ ಮನುಜ ಈಗಲಾದರೂ ಎಚ್ಚೆತ್ತು ನಿಸರ್ಗಕ್ಕೆ ಪೂರಕವಾಗಿ ಹೆಜ್ಜೆ ಹಾಕಿದರೆ ಮತ್ತೊಮ್ಮೆ ನಾವೆಲ್ಲರೂ ಹೊಸ ಬದುಕನ್ನು ಕಟ್ಟಿಕೊಳ್ಳಬಹುದು.