ಕಲಬುರಗಿ: ತಮ್ಮನ್ನು ಟ್ವಿಟರ್ ಖರ್ಗೆ ಎಂದು ವ್ಯಂಗ್ಯವಾಡಿದ್ದ ಮಾಜಿ ಶಾಸಕ ಮಾಲಿಕಯ್ಯ ಗುತ್ತೇದಾರ ಹಾಗೂ ಬಿಜೆಪಿ ನಾಯಕರಿಗೆ ಶಾಸಕರಾದ ಪ್ರಿಯಾಂಕ್ ಖರ್ಗೆ ಅವರು ಅದೇ ದಾಟಿಯಲ್ಲೇ ಬರೆದುಕೊಳ್ಳುವ ಮೂಲಕ ತಿರುಗೇಟು ನೀಡಿದ್ದಾರೆ.
” ಕಲಬುರಗಿ ಜಿಲ್ಲಾಧಿಕಾರಿ ವರ್ಗಾವಣೆ ನಂತರ ವ್ಯಕ್ತವಾದ ಸಾರ್ವಜನಿಕರ ಆಕ್ರೋಶ ಹಾಗೂ ನಕರಾತ್ಮಕ ಪ್ರತಿಕ್ರಿಯೆಗಳ ನಂತರ ಸಿಎಂ ಅವರನ್ನ ಸಮಾಧಾನಪಡಿಸಲು ಬಿಜೆಪಿ ನಾಯಕರು ಬೆಂಗಳೂರಿಗೆ ಧಾವಿಸಿದ್ದಾರೆ.
ಈ ನಡುವೆ ಉತ್ತರ ಸಿಗದ ಪ್ರಶ್ನೆಗಳಿವು: ಜಿಲ್ಲಾಧಿಕಾರಿ ವರ್ಗಾವಣೆ ಯಾಕೆ ಮಾಡಲಾಗಿತ್ತು? ವರ್ಗಾವಣೆಯಲ್ಲಿ ತಮ್ಮದೇನು ಪಾತ್ರ ಇಲ್ಲ ಹೇಳಿಕೊಂಡ ಬಿಜೆಪಿ ನಾಯಕರು ವಿಡಿಯೋ ಬಿಡುಗಡೆ ಮಾಡಿದ್ದು ಯಾಕೆ? ಸಿಎಂ ಅವರಿಗೆ ತಪ್ಪು ಮಾಹಿತಿ ನೀಡಿದ್ದು ಯಾರು? ”
ಎಂದು ಟ್ವೀಟ್ ಮಾಡಿ ಪ್ರಶ್ನಿಸಿರುವ ಶಾಸಕರು ಯಾರು ತಮ್ಮನ್ನು ಟ್ವೀಟರ್ ಖರ್ಗೆ ಎಂದು ಕರೆದಿದ್ದರೋ ಅದೇ ಹೆಸರನ್ನೇ ಟ್ವೀಟ್ ಕೊನೆಯಲ್ಲಿ ಪುನಃ ನಮೂದಿಸಿ ಶಾಸಕರು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.