ಚಿಂಚೋಳಿ: ತಾಲೂಕಿನ ಸೇಡಂ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸುಲೇಪೇಟ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಹಿಂದುಗಡೆ ಈದ್ಗಾ ಮೈದಾನದ ಹತ್ತಿರದಲ್ಲಿರುವ ಆರಿಫ್ ನಗರದಲ್ಲಿ ಸುಮಾರು 15 ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ ಎಂದು ಗ್ರಾಮದ ಮಹಿಳೆಯರು ಕಾಲಿ ಕೊಡಗಳು ಇಡುವ ಮೂಲಕ ಪಂಚಾಯಿತ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ನೀರಿಗಾಗಿ ನಾವು ಉರಿಬಿಸಿಲಿನಲ್ಲಿ ಪಕ್ಕದ ಕೆ.ಇ.ಬಿ.ಕಾರ್ಯಾಲಯದಲ್ಲಿರುವ ಬೋರ್ವೆಲಗಳಿಗೆ ಹೊದರೆ ಅಲ್ಲಿರುವ ಸಿಬ್ಬಂದಿಗಳು ನಮಗೆ ಬೈಯುತ್ತಿದ್ದಾರೆ ಮತ್ತು ಖಾಸಗಿ ಮನೆಯವರಲ್ಲಿ ಬೇಡಿಕೊಂಡರೆ ಒಂದು ಕೊಡ ನೀರು ಕೊಟ್ಟು ಪುಣ್ಯ ಕಟ್ಟಿಕೊಂಡು ಮೋಟಾರ್ ಬಂದ್ ಮಾಡುತ್ತಿದ್ದಾರೆ ಇಂತಹ ಸಂದರ್ಭದಲ್ಲಿ ಕುಡಿಯುವ ನೀರಿಗಾಗಿ ದಿನನಿತ್ಯ ಪಡುವ ಕಷ್ಟ ಅಷ್ಟಿಷ್ಟಲ್ಲ ಶಾಸಕರು, ಅಧಿಕಾರಿಗಳು ಹಗಲು ನಿದ್ರೆ ಮಾಡದೆ ಎಂದು ಕಿಡಿಕಾರಿದರು.
ಇತ್ತ ಕಡೆ ಯಾರೊಬ್ಬ ಅಧಿಕಾರಿ, ಜನಪ್ರತಿನಿಧಿ ಗಮನಹರಿಹರಿಸದಿರುವುದು ಬೇಸರ ಉಂಟುಮಾಡಿದೆ ಕೊಡಲೆ ಎಚ್ಚೆತ್ತುಕೊಂಡು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಭಾರತ ಮುಕ್ತಿ ಮೊರ್ಚಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾರುತಿ ಗಂಜಗಿರಿ, ಹಾಫೀಜ್ ಸರ್ದಾರ್, ರಾಷ್ಠೀಯ ಮೂಲನಿವಾಸಿ ಮಹಿಳಾ ಸಂಘದ ಮುಖಂಡರಾದ ಸ್ವರೂಪಾ. ರಾಮಲಮ್ಮ, ರುಕ್ಮಣಿ, ಶಭೀನಾಬೇಗಮ್, ಸೋಮಶೇಖರ ಜಾಬಿನ್, ಜಬ್ಬಾರಮಿಯ್ಯ ಮುಂತಾದವರು ಉಪಸ್ಥಿತರಿದ್ದರು.