ಕೊರೋನಾ ಸೋಂಕಿನಿಂದ ಇಬ್ಬರು ಗುಣಮುಖ, ಅಸ್ಪತ್ರೆಯಿಂದ ಬಿಡುಗಡೆ

0
50

ಕಲಬುರಗಿ: ಕೊರೋನಾ ಸೋಂಕಿನಿಂದ ಗುಣಮುಖರಾದ ಕಲಬುರಗಿ ನಗರದ ಇಬ್ಬರು ರೋಗಿಗಳನ್ನು ಶುಕ್ರವಾರ ಅಸ್ಪತ್ರೆಯಿಂದ ಬಿಡುಗಡೆಗೊಳಿಸಿದೆ ಎಂದು ಜಿಲ್ಲಾಧಿಕಾರಿ ಶರತ್‌ ಬಿ. ಅವರು ತಿಳಿಸಿದ್ದಾರೆ.

ಕಲಬುರಗಿ ನಗರದ ಮೋಮಿನಪುರ ಪ್ರದೇಶದ 51 ವರ್ಷದ ಪುರುಷ (ರೋಗಿ ಸಂಖ್ಯೆ-255) ಮತ್ತು ಸಂತ್ರಾಸವಾಡಿ ಪ್ರದೇಶದ 35 ವರ್ಷದ ಯುವತಿ(ರೋಗಿ ಸಂಖ್ಯೆ-256) ಇವರು ಗುಣಮುಖರಾಗಿ ಅಸ್ಪತ್ರೆಯಿಂದ‌ ಬಿಡುಗಡೆಗೊಂಡವರು. ಇವರಿಬ್ಬರಿಗೆ ಏಪ್ರಿಲ್ 14ರಂದು ಕೊರೋನಾ ಸೋಂಕು ದೃಢವಾಗಿದ್ದರಿಂದ ಇ.ಎಸ್.ಐ.ಸಿ.ಯಲ್ಲಿ ಚಿಕಿತ್ಸೆಗೆ ದಾಖಲಾಗಿಸಿತ್ತು.

Contact Your\'s Advertisement; 9902492681

ಇದರಿಂದ ಕಲಬುರಗಿ ಜಿಲ್ಲೆಯಲ್ಲಿ ಇದೂವರೆಗೆ ಕೊರೋನಾ‌ ಪಾಸಿಟಿವ್ ಪತ್ತೆಯಾದ 55 ಜನರಲ್ಲಿ ಒಟ್ಟು 14 ಜನ ರೋಗಿಗಳು ಕೊರೋನಾ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಉಳಿದಂತೆ 5 ಜನ ನಿಧನ ಹೊಂದಿದ್ದು, 36 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಿ.ಸಿ. ಶರತ್ ಬಿ. ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here