ರಾಜ್ಯದಲ್ಲಿ ಮತ್ತೆ ಮಧ್ಯ ಮಾರಾಟಕ್ಕೆ ಮುಂದಾಗಿರುವುದು ಖಂಡನೀಯ: ಮಠಪತಿ

0
95

ಕಲಬುರಗಿ : ಕೂರೋನಾ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಸಮಯದಲ್ಲಿ ಮಧ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು ರಾಜ್ಯದಲ್ಲಿ ಮತ್ತೆ ಮಧ್ಯ ಮಾರಾಟಕ್ಕೆ ಮುಖ್ಯಮಂತ್ರಿಗಳು ಮುಂದಾಗಿರುವುದು ಖಂಡನೀಯವಾಗಿದ್ದು ಕೂಡಲೇ ಆದೇಶ ಹಿಂಪಡೆಯಬೇಕು ಎಂದು ಜನಪರ ಹೋರಾಟಗಾರ ನಾಗಲಿಂಗಯ್ಯ ಮಠಪತಿ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆಯೊಂದನ್ನು ನೀಡಿರುವ ಅವರು ಆರ್ಥಿಕ ಸಂಪನ್ಮೂಲ ಕೋಡ್ರಿಕರಣದ ಹಿನ್ನೆಲೆಯಲ್ಲಿ ಮಧ್ಯ ಮಾರಾಟಕ್ಕೆ ಅನುಮತಿ ನೀಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನೆಸಿರುವ ಹಣಕಾಸು ಹೊಂದಾಣಿಕೆ ಮಾಡುವುದು ಸಹ ಅತಂತ್ಯ ಮುಖ್ಯವಾಗಿದ್ದು ಪರ್ಯಾಯ ಮಾರ್ಗಗಳ ಕುರಿತು ಆಲೋಚಿಸಬೇಕು ಮತ್ತು ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು ಬಜೆಟ್ ನಲ್ಲಿ ಘೋಷಣೆ ಮಾಡಿದ ಕೆಲ ಜನಪ್ರಿಯ ಯೋಜನೆಗಳನ್ನು ಕೈ ಬಿಟ್ಟು ಜನಹಿತ ಯೋಜನೆಗಳನ್ನು ಮುಂದುವರೆಸಿ ಕೊಂಡು ಹೋಗಲಿ ಅದು ಬಿಟ್ಟು ಮಧ್ಯ ಮಾರಾಟದ ಮೂಲಕ ರಾಜ್ಯದ ಬೊಕ್ಕಸ ತೂಂಬಿಕೊಳ್ಳಲು ನಿರ್ಧರಿಸಿದ್ದು ನೋವಿನ ಸಂಗತಿಯಾಗಿದ್ದು ಮಧ್ಯವಸನಿಗಳು ಸಹ ನಿಧಾನವಾಗಿ ಹೊರ ಬರುತ್ತಿದ್ದು ಕುಟುಂಬಗಳು ನಮ್ಮೆದಿಯಿಂದ ಬದುಕುತ್ತಿವೆ ವಾಸ್ತವ ಮುಖ್ಯಮಂತ್ರಿಗಳು ಅರ್ಥ ಮಾಡಿಕೊಳ್ಳಬೇಕು ಜನತೆಯ ಹಿತಕ್ಕಿಂತ ಯಾವುದು ದೊಡ್ಡದಲ್ಲ ದುಡಿಯಲು ಉದ್ಯೋಗ ಇಲ್ಲ ಕೈಯಲ್ಲಿ ಕಾಸಿಲ್ಲ ಈ ಸಂದರ್ಭದಲ್ಲಿ ಮಧ್ಯ ಮಾರಾಟ ಮಾಡಲು ಪ್ರಾರಂಭಿಸಿದರು ಕುಡುಕರು ಸರ್ಕಾರ ಕೊಟ್ಟಿರುವ ಪಡಿತರ ಧ್ಯಾನವನ್ನು ಮಾರಾಟ ಮಾಡಿ ಮಧ್ಯ ಕುಡಿಯುತ್ತಾರೆ ಇದರಿಂದ ಇಡೀ ಕುಟುಂಬ ಉಪವಾಸ ಬೀಳುವ ಪರಿಸ್ಥಿತಿ ಬರುತ್ತದೆ ಎಂದು ಮಠಪತಿ ವಿವರಿಸಿದ್ದಾರೆ.

Contact Your\'s Advertisement; 9902492681

ದೇಶದ ಅನೇಕ ರಾಜ್ಯಗಳಲ್ಲಿ ಮಧ್ಯ ನಿಷೇಧ ಇದ್ದು ಅಲ್ಲಿನ ಆರ್ಥಿಕಕೊರೋನಾತಿ ಸಹ ಉತ್ತಮವಾಗಿದ್ದು ಮಧ್ಯ ಮಾರಾಟದಿಂದಲೇ ಆದಾಯದ ನಿರೀಕ್ಷೆ ಬಿಟ್ಟು ಆಲೋಚನೆ ಮಾಡುವುದು ಒಳಿತು ಮುಖ್ಯಮಂತ್ರಿ ಯಡಿಯೂರಪ್ಪನವರು ಸಹ ಗ್ರಾಮೀಣ ಪರಿಸರದಿಂದ ಹೋರಾಟದ ಹಿನ್ನೆಲೆಯಿಂದ ಬಂದವರು ರಾಜ್ಯದಲ್ಲಿ ಮಧ್ಯ ನಿಷೇಧ ಮಾಡಲು ಕಾಲ ಪಕ್ವವಾಗಿದ್ದು ಗಟ್ಟಿ ನಿರ್ಧಾರ ಮಾಡಿ ರಾಜ್ಯದಲ್ಲಿ ಸಂಪೂರ್ಣವಾಗಿ ಮಧ್ಯ ನಿಷೇದ ಮಾಡಿ ಇತಿಹಾಸ ನಿರ್ಮಿಸಬೇಕು ರಾಜ್ಯದ ಎಲ್ಲಾ ಜನ ಪ್ರತಿನಿಧಿಗಳು ಮುಖ್ಯಮಂತ್ರಿಗಳಿಗೆ ಮತ್ತು ರಾಜ್ಯ ಸರ್ಕಾರಕ್ಕೆ ಬೆಂಬಲ ನೀಡುವಂತೆ ಅವರು ಕೋರಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here