ಕಲಬುರಗಿ: ಕೊರೊನಾ ಮಹಾಮಾರಿ ತಡೆಗಟ್ಟಲು ಜಾರಿಗೊಳಿಸಿರುವ ಲಾಕ್ ಡೌನ್ ಮೇ. 4ರ ನಂತರ ಸಡಿಲಿಗೆ ಮಾಡಿ ವಾಣಿಜ್ಯ ವಹಿವಾಟುಗಳಿಗೆ ಸಡಿಲಿಕೆ ನೀಡಲಾಗುವುದೆಂದು ಅವರು ತಿಳಿಸಿದ್ದಾರೆ.
ಅವರು ಇಂದು ಕಲಬುರಗಿ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡರಯುತ್ತಿರುವ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು 4ರ ನಂತರ ಆಟೋ, ಕಾರ್ ಓಡಾಟ ಮತ್ತು ಕ್ಷೌರಿಕ ಅಂಗಡಿ ಓಪನ ಮಾಡಲು ಅವಕಾಶ ನೀಡಲಾಗುವುದೆಂದು ಅವರು ತಿಳಿಸಿದರು.
ಅದೇ ರೀತಿ ವಾಣಿಜ್ಯ ವಹಿವಾಟು ಪ್ರಾರಂಭಕ್ಕೆ ಅವಕಾಶ ವದಗಿಸುವುದ್ದಾಗಿ ಈ ಸಂದರ್ಭದಲ್ಲಿ ತಿಳಿಸಿ, ಅದೆ ರೀತಿ ಕೋರಿಯರ್, ಪೋಸ್ಟಲ್, ಕಾರ್ಖಾನೆ ಹಾಗೂ ಇನ್ನಿತರ ವಾಣಿಜ್ಯ ವಹಿವಾಟಿಗೆ ಅವಕಾಶ ಕಲ್ಪಿಸಿ ಕೊಡಬಹುದು ಎನ್ನಲಾಗುತ್ತಿದೆ. ಆದ್ರೆ ನಿರ್ಬಂಧಿತ ಪ್ರದೇಶ ಯತಾವತ್ತಾಗಿ ಮುಂದುವರೆಯಲಿದೆ ಎಂದು ಅವರು ಇದೇ ವೇಳೆ, ಸ್ಪಷ್ಟಪಡಿಸಿದ್ದಾರೆ.