ಕಲಬುರಗಿ: ಕೊರೊನಾ ಹಾಟ್ ಸ್ಪಾಟ್ ಆಗಿರುವ ಕಲಬುರಗಿಗೆ ಕಂಟೋನ್ಮೆಂಟ್ ಝೋನ್ ನ್ನು ರೇಡ್ ಝೋನ್ ಘೋಷಿಸಿ, ಉಳಿದ ಪ್ರದೇಶಗಳು ಆರೆಂಜ್ ಝೋನ್ ಒಳಪಡಿಸಿ ಮುಂಜಾಗ್ರತೆ ವಹಿಸಲಾಗುತ್ತಿದೆ.
ಕಳೆದ ಎರಡುದಿನಗಳಿಂದ ಜಿಲ್ಲೆಯಲ್ಲಿ ವೈರಸ್ ದಿಂದ ತುಸು ನೆಮ್ಮದಿ ಕಂಡಿದ್ದ ನಗರ ಇಂದು ಮತ್ತೆ ಮೂವರಿಗೆ ಕೊರೊನಾ ಪಾಸಿಟಿವ್ ಆಗಿರುವುದು ವರದಿಯಾಗಿದೆ. ಈ ಮೂಲಕ ಪೀಡಿತರ ಸಂಖ್ಯೆ 58ಕ್ಕೆ ತಲುಪಿದೆ.
ಮೋಮಿನ್ ಪುರಾದ ನಿವಾಸಿ ರೋಗಿ ಸಂಖ್ಯೆ P532 ಸಂಪರ್ಕದಿಂದ 13 ವರ್ಷದ ಯುವತಿ ಮತ್ತು 54 ವ್ಯಕ್ತಿಗೆ ವೈರಸ್ ತಗುಲಿದೆ. ಅದೇ ರೀತಿ 41ವರ್ಷದ ವ್ಯಕ್ತಿ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದರಿಗೆ ಸೋಂಕು ಇರುವುದು ದೃಢಪಟ್ಟಿದೆ. ಪೀಡಿತರನ್ನು ನಗರದ ನಿಗದಿತ ಇ.ಎಸ್.ಐ.ಸಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಕೊರೊನಾಗೆ ಜಿಲ್ಲೆಯಲ್ಲಿ ಐವರು ಮೃತಪಟ್ಟಿದ್ದು, 18ಜನ ಚಿಕಿತ್ಸೆಯಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ತಿಳಿದುಬಂದಿದೆ.