ಇವನಾರವ; ಜಾತಿ, ಇವನಮ್ಮವ; ಧರ್ಮ : ವಚನ ಹೃದಯ ಭಾಗ-24

0
74

ದಯೆ, ಕರುಣೆ, ಪ್ರೀತಿಯ ಮೂಲಕ “ವಿಶ್ವ ಕುಟುಂಬ” ಕಟ್ಟ ಬಯಸುವ ಹಿನ್ನೆಲೆಯಲ್ಲಿ ಕಾಯಕ-ದಾಸೋಹವನ್ನೇ ಪ್ರಧಾನ ಕಾಳಜಿಯನ್ನಾಗಿಟ್ಟುಕೊಂಡು ಆ ದಿಸೆಯಲ್ಲಿ ಅಹರ್ನಿಶಿ ಶ್ರಮಿಸಿದ, ಚಿಂತಿಸಿದ ಶರಣರು ಮಾನವ,ಸಮಗ್ರ ಮಾನವನಾಗುವುದು ಹೇಗೆ? ಎಂಬುದನ್ನು ಅತ್ಯಂತ ಅರ್ಥಪೂರ್ಣವಾಗಿ ವಿಷದಿಕರಿಸಿದ್ದಾರೆ.

ಈ ಜೀವ ಜಗತ್ತಿಗೆ ಇರುವುದೊಂದೇ ಭೂಮಿ, ಕುಡಿಯಲೊಂದೇ ಜಲ ಇರುವಾಗ ನಾ ಮೇಲು, ನೀ ಕೀಳು ಎಂಬ ತರತಮ ಭಾವನೆ ನಮ್ಮಲ್ಲಿ ಯಾಕೆ? ವಿಪ್ರ-ಸ್ವಪಚ ಸೇರಿದಂತೆ ಸಕಲ ಜೀವರಾಶಿಗಳು ಕೂಡ ಇದೇ ಭೂಮಿಯ ಮೇಲೆ ಜೀವಿಸುತ್ತಿರುವಾಗ ಅಲ್ಲ ಸಲ್ಲದ ನಿಯಮಗಳ ಸವಾರಿ ಮಾಡುವುದು ಯಾವೂರ ನ್ಯಾಯ? ಎಂದು ಪ್ರಶ್ನಿಸಿದ ಶರಣರು ಸರಳ ಜೀವನದಿಂದಲೇ ಸುಖ ಸಂಸಾರ, ಜೀವನ್ಮುಕ್ತಿ ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

ಸಾರ್ಥಕ ಬದುಕಿಗೆ ಬೇಕಾದ (ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಇದಿರ ಹಳಿಯಲು ಬೇಡ, ತನ್ನ ಬಣ ್ಣಸಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ) ಸಪ್ತಸೂತ್ರ ಹೇಳಿಕೊಟ್ಟ ಬಸವಾದಿ ಶರಣರ ವಚನ ಸಾಹಿತ್ಯವು ಮಾನವೀಯ ಸಂಬಂಧಗಳ ನೆಲೆವನೆಯಾಗಿದೆ ಮಾತ್ರವಲ್ಲ ಸಕಲ ಜೀವಾತ್ಮರಿಗೆ ಲೇಸು ಬಯಸುವ ತವನಿಧಿಯಾಗಿದೆ. ಸುಂದರ ಬದುಕಿಗೆ ಅಗತ್ಯವಾದ (ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ಭಸ್ಮ, ರುದ್ರಾಕ್ಷಿ, ಮಂತ್ರ) ಅಷ್ಟ ಆವರಣಗಳನ್ನು ಕೊಟ್ಟ ಅವರು, ಆತ್ಮ ಸಂಬಂಧ ಮತ್ತು ಅಂತಿಮ ಸತ್ಯದ ಬಗ್ಗೆ ಅಂದೇ ಮಾತನಾಡಿದ್ದಾರೆ.

ಇವನಾರವ ಇವನಾರವ ಎಂದೆನಿಸದಿರಯ್ಯ
ಇವನಮ್ಮವ ಇವನಮ್ಮವ ಎಂದೆನಿಸಯ್ಯ
ಕೂಡಲಸಂಗಮ ದೇವ
ಇವ ನಮ್ಮ ಮನೆಯ ಮಗನೆಂದೆನಿಸಯ್ಯ

ಹುಟ್ಟುವ ಪ್ರತಿ ಮಗುವು ವಿಶ್ವ ಮಾನವನೇ! ನಂತರ ಆ ಮಗುವನ್ನು ವಿವಿಧ ಜಾತಿ, ಮತದ ಕಟ್ಟುಪಾಡುಗಳಿಂದ ಬಂಧಿಸಲಾಗುತ್ತದೆ. ಯಾವುದೇ ಒಬ್ಬ ವ್ಯಕ್ತಿ ಜಾತಿಯಿಂದ ಮುಖ್ಯನಾಗಬಾರದು. ಆತ ತನ್ನ ಕ್ರಿಯಾಶಕ್ತಿಯಿಂದ ಮುಖ್ಯನಾಗಬೇಕು. ಜಾತಿಗಿಂತ ನೀತಿ ಮುಖ್ಯ. ಮನುಷ್ಯತ್ವ ಮುಖ್ಯ. ಅಂತಹ ಮನುಷ್ಯತ್ವವನ್ನು, ಮಾನವೀಯತೆಯನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು.

ಇವನಾರವ ಎಂದು ಎಲ್ಲರನ್ನು ಪ್ರತ್ಯೇಕಿಸುತ್ತ ಹೋದರೆ ನಮ್ಮ ಜೊತೆಗೆ ಯಾರೂ ಉಳಿಯುವುದಿಲ್ಲ. ಅದು ಜಾತಿ ವ್ಯವಸ್ಥೆಯ ಸಂಕೇತವಾಗುತ್ತದೆ. ಇವ ನಮ್ಮವ ಎಂಬ ಒಲವಿನ ಭಾವನೆ ಇದ್ದಾಗ ಮಾತ್ರ ಎಲ್ಲರೂ ನಮ್ಮೆಡೆಗೆ ಧಾವಿಸುತ್ತಾರೆ. ಅದು ಉತ್ತಮ ಧರ್ಮದ ಸಂಕೇತವೆನಿಸುತ್ತದೆ. ಒಬ್ಬ ವ್ಯಕ್ತಿ ಕೇವಲ ನಮ್ಮವ ಮಾತ್ರವಲ್ಲ ನಮ್ಮ “ಮನೆಯ ಮಗ” ಎನ್ನುವಷ್ಟರ ಮಟ್ಟಿಗೆ ಸಮಾಜದಲ್ಲಿ ತಾದ್ಯಾತ್ಮ, ಒಗ್ಗಟ್ಟು ಬರಬೇಕು ಎಂಬುದು ಬಸವಣ್ಣನವರ ಆಶಯವಾಗಿತ್ತು. ಇದಕ್ಕಿಂತ ವಿಶ್ವ ಮಾನವ ಸಂದೇಶ ಮತ್ತೊಂದಿದೆಯೇ? ನೀವೆ ಹೇಳಿ?

ಲೋಕದಲ್ಲಿರುವ ಮನುಜರ್ಯಾರೂ ಜಾತಿ, ಭೇದ ಮಾಡದೆ ಪರಸ್ಪರ ಸಹ ಜೀವನ ನಡೆಸಬೇಕು. ಅದುವೇ ನಿಜವಾದ ಮನುಷ್ಯ ಧರ್ಮ ಎಂಬುದನ್ನು ಬಹಳ ಸ್ಪಷ್ಟವಾಗಿ ಹೇಳುತ್ತದೆ. ಇಂತಹ ಜಾತ್ಯತೀತ ಧರ್ಮದಲ್ಲಿ ಹಿಂದು, ಮುಸ್ಲಿಂ, ಶಿಖ್, ಇಸಾಯಿ ಧರ್ಮ ಭೇದ ಎಂಬುದಿರುವುದಿಲ್ಲ. ಹೆಣ್ಣು, ಗಂಡು ಎಂಬ ಲಿಂಗಭೇದ ಇರುವುದಿಲ್ಲ. ಸ್ಪøಶ್ಯ-ಅಸ್ಪøಶ್ಯ ಎಂಬ ಜಾತಿ ಭೇದ ಇರುವುದಿಲ್ಲ. ಬಡವ-ಬಲ್ಲಿದ, ಮೇಲು-ಕೀಳು ಎಂಬ ವರ್ಗ ತಾರತಮ್ಯವೂ ಇರುವುದಿಲ್ಲ. ಎಲ್ಲರಿಗೂ ಸಮಾನ ಅವಕಾಶಗಳಿರಬೇಕು ಎಂದು ಬಸವಣ್ಣನವರು ಬಯಸಿದ್ದರು. ಸರ್ವರಿಗೆ ಸಮಬಾಳು; ಸರ್ವರಿಗೆ ಸಮಪಾಲು ಎಂಬುದು ಅವರ ಮನದ ಇಂಗಿತವಾಗಿತ್ತು.

ಪಾಶ್ಚಾತ್ಯ ದೇಶಗಳ ಚಿಂತನೆ, ತಂತ್ರಜ್ಞಾನ, ಪ್ರಯೋಗಗಳೇ ಶ್ರೇಷ್ಠ ಎಂದು ಅವುಗಳನ್ನು ನೆಚ್ಚಿಕೊಂಡಿರುವ ಭಾರತೀಯರಾದ ನಮಗೆ ಈ ಹಿಂದೆ 12ನೇ ಶತಮಾನದಲ್ಲಿ ಬಸವಾದಿ ಶರಣರು ಕಟ್ಟಿಕೊಟ್ಟ ಈ ಚಿಂತನೆ ಇಂದಿಗೂ ಪ್ರಸ್ತುತವಾಗಿದೆ ಎಂದು ತಿಳಿಯಲು ಕನ್ನಡಿಗರಾದ ನಮಗೆ ಪುರುಷೊತ್ತಿಲ್ಲ. ಶರಣರ ಬದುಕನ್ನು ತೆಗೆದು ಓದುವ, ಬಗೆದು ನೋಡುವ ವ್ಯವದಾನ ನಮ್ಮಲ್ಲಿ ಇಲ್ಲದಂತಾಗಿದೆ. ಅಂತೆಯೇ ಇಂದು ಕೊರೊನಾದಂತ ಮಹಾಮಾರಿಗೂ ಕೋಮು ವೈರಸ್ ಅಂಟಿಕೊಂಡು ಹೊತ್ತಿ ಉರಿಯುತ್ತಿದೆ.

ಕೊರೊನಾ ಎಂಬ ಕಣ ್ಣಗೆ ಕಾಣದ ವೈರಾಣುವಿನಂದಿಗಾಗಿ ಇಡೀ ಜಗತ್ತು ಇಂದು ತಲ್ಲಣಗೊಂಡಿರುವುದು ನಿಜ. ಆದರೆ ಭಾರತದಲ್ಲಿ ಮಾತ್ರ ಇದು ಬೇರೆಯ (ಕೋಮು) ಸ್ವರೂಪ ಪಡೆದುಕೊಳ್ಳುತ್ತಿರುವುದು ಆತಂಕಕಾರಿ ಬೆಳವಣ ಗೆಯಾಗಿದೆ. ಈ ಸಂದರ್ಭದಲ್ಲಿ ಜೀವಕಂಟಕ ಕೊರೊನಾದಿಂದ ರಕ್ಷಿಸಿಕೊಳ್ಳುವ ಬಗೆ ಕುರಿತು ತಲೆಕೆಡಿಸಿಕೊಳ್ಳಬೇಕು ವಿನಃ ಭಾರತದಂತಹ ಜಾತ್ಯತೀತ ರಾಷ್ಟ್ರದಲ್ಲಿ ಕೊರಾನಾ ವೈರಸ್‍ನ್ನು ಒಂದು ಜಾತಿಗೆ ಸೀಮಿತೊಳಿಸುವ ಸಂಕುಚಿತ ಭಾವನೆ ತಾಳಬಾರದು. ಅಂದ ಮಾತ್ರಕ್ಕೆ ಅವರಲ್ಲಿ ಕೆಲವರು ಮಾಡಿರುವ ಕೃತ್ಯಗಳು ಕೂಡ ಸಮರ್ಥನೀಯವಲ್ಲ. ಹೀಗಾಗಿ ನಾವೆಲ್ಲರೂ ಭಾವೈಕ್ಯ ಭಾವ ಅಥವಾ ಬಸವ ಭಾವ ತಾಳಬೇಕಾಗಿರುವುದು ಇಂದಿನ ಜರೂರತ್ತುಗಳಲ್ಲಿ ಒಂದಾಗಿದೆ. ಅಂದಾಗ ಮಾತ್ರ ವಿಶ್ವ ಕುಟುಂಬ ಜೀವನ ಸಾಗಿಸಲು ಸಾಧ್ಯ! ಇಲ್ಲದಿದ್ದಲ್ಲಿ ಸ್ವಾರ್ಥಿಗಳಾಗಿ ಮನುಷ್ಯ ಜನ್ಮ ಹಾಳು ಮಾಡಿಕೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ.

ಶಿವರಂಜನ್ ಸತ್ಯಂಪೇಟೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here