ಶಹಾಪುರ: ನಿತ್ಯೋತ್ಸವ ಕವಿ ನಾಡೋಜ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಹಾಗೂ ಹಿರಿಯ ಸಾಹಿತಿಗಳಾದ ಕೆ.ಎಸ್. ನಿಸಾರ್ ಅಹಮ್ಮದ್ ಅವರ ಅಕಾಲಿಕ ನಿಧನದಿಂದ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ ಆಗಿದೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ದಲಿಂಗಣ್ಣ ಆನೇಗುಂದಿ ಹೇಳಿದರು.
ಹುಟ್ಟು ಮುಸ್ಲಿಂ ನಾದರೂ ಕೂಡ ಕನ್ನಡ ನಿರರ್ಗಳವಾಗಿ ತಮ್ಮ ಬರವಣಿಗೆ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ಚರಿತ್ರೆಯನ್ನೇ ಸೃಷ್ಟಿಸಿದ್ದಾರೆ ನಾಡಿನಾದ್ಯಂತ ನಿತ್ಯೋತ್ಸವ ಕವಿ ಎಂದೇ ಪ್ರಸಿದ್ಧಿ ಪಡೆದವರು .
ಈ ಸಂದರ್ಭದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷರಾದ ಬಸವರಾಜ್ ಹಿರೇಮಠ್,ಸಾಹಿತಿಗಳಾದ ಸಿದ್ಧರಾಮ ಹೊನಕಲ್, ಶಿವಣ್ಣ ಇಜೇರಿ,ಡಾ:ಮೋನಪ್ಪ ಶಿರವಾಳ,ವಿಶ್ವಾರಾಧ್ಯ ಸತ್ಯಂಪೇಟೆ ಡಾ:ಅಬ್ದುಲ್ ಕರೀಂ ಕನ್ಯಾಕೋಳೂರ ಕಾರ್ಯದರ್ಶಿ ಬಸವರಾಜ ಸಿನ್ನೂರ ಹಾಗೂ ಪಂಚಾಕ್ಷರಿ ಹಿರೇಮಠ ಈ ಸಂದರ್ಭದಲ್ಲಿ ಸಂತಾಪ ಸೂಚಿಸಿದ್ದಾರೆ.