ಸೇಡಂ: ದೇಶದಲ್ಲಿ ಕೊರೋನಾ ವ್ಯಾಪಕವಾಗಿ ಹರಡುತಿದ್ದು ಇದರ ಹಿನ್ನೆಲೆಯಲ್ಲಿ 3 ಹಂತದ ಲಾಕ್ ಡೌನ್ ಜಾರಿಗೊಳಿಸಿದ ಸರಕಾರ ಇದರ ಬೆನ್ನೆಲೆ ಸಡಿಲಿಗೊಳಿಸಿ ಇಂದು ಮದ್ಯ ಅಂಗಡಿಗಳು ತೆರೆದವು.
ಪಟ್ಟಣದ ಲಕ್ಷ್ಮಿ ನರಸಿಂಹ ವೈನ್ ಶಾಪ್ ಮುಂದೆ ಮದ್ಯಕ್ಕಾಗಿ ಸೇರಿದ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಸಾಲಾಗಿ ನಿಂತಿರುವ ದೃಶ್ಯಕಂಡು ಬಂದಿತು. ನಂತರ ಬಂದ ಪೊಲೀಸರು ಮದ್ಯ ಪ್ರಿಯರಿಗೆ ಸಾಮಾಜಿಕ ಅಂತರ ನಿಯಂತ್ರಿಸಲು ಹರ ಸಾಹಸ ಪಡುತ್ತಿದ್ದರು.
ನೂರಾರು ಸಂಖ್ಯೆಯಲ್ಲಿ ಎಣ್ಣೆ ಗಾಗಿ ಸುಡು ಬಿಸಿಲು ಲೆಕ್ಕಿಸದೇ ನೂರಾರು ಅಡಿಯಲ್ಲಿ ಕ್ಯೂ ನಿಂತು ಮದ್ಯ ಪಡೆದು ಖುಷಿ ಪಡೆದರು.
-
ಶಪೀಕ್ ಊಡಗಿ.