ತೊಟ್ಟಿಲು
ಕಣ್ಣು ಬಿಡುವ ಮೊದಲು
ತಾಯಿ ಮಾಡಿಲೇ ತೊಟ್ಟಿಲು
ಕಣ್ಣು ಬಿಟ್ಟು ಭುವಿಗೆ ಬರಲು
ತಾಯಿ ತೊಡೆಯೇ ತೊಟ್ಟಿಲು
ಕಣ್ಣು ಬಿಟ್ಟು ಅಳಲು
ಅಮ್ಮ ಮುತ್ತ ನಿಟ್ಟಳು
ಹಸಿವು ನೀಗಿ ಮಲಗಲು
ತೊಟ್ಟಿಲಲ್ಲಿ ಇಟ್ಟಳು
ತೂಗಿ ತೂಗಿ ತೊಟ್ಟಿಲು
ಲಾಲಿ ಹಾಡಿ ಬಿಟ್ಟಳು
ಜೋಗುಳವ ಕೇಳಲು
ನಕ್ಕು ನುಡಿವೆ ತೊದಲು
ತಪ್ಪು ಹೆಜ್ಜೆ ಇಡಲು
ಬಿದ್ದೆ ನೋಡಿ ಮುಗಿಲು
ಅಮ್ಮ ಆಗ ದಿಗಿಲು
ಮರುಗಿ ಮನದಿ ನೊಂದಳು
ನಾಮಕರಣ ಮಾಡಲು
ಕಟ್ಟಿದರು ತೊಟ್ಟಿಲು
ಅತ್ತಿ ನನ್ನ ಕಿವಿಯಲಿ
ಹೆಸರನಿಟ್ಟು ನಕ್ಕಳು